ಸೋಮವಾರ, ಡಿಸೆಂಬರ್ 9, 2019
21 °C

ವೈರಲ್‌ ಆಯ್ತು ಅಕ್ಷಯ್‌ ಕುಮಾರ್ ನಟನೆಯ ಬೆಲ್‌ ಬಾಟಂ ಚಿತ್ರದ ಫಸ್ಟ್‌ ಲುಕ್‌

Published:
Updated:

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್ ಅವರು 80ರ ದಶಕದ ಬೆಲ್‌ ಬಾಟಂ ಶೈಲಿಯಲ್ಲಿರುವ ತಮ್ಮ ಪೋಟೋ ಟ್ವೀಟ್‌ ಮಾಡುವ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 52 ವರ್ಷದ ನಟ ಅಕ್ಷಯ್‌ ಕುಮಾರ್‌, ನ.10ರಂದು ತಮ್ಮ ಮುಂದಿನ ಚಿತ್ರ ಬೆಲ್‌ ಬಾಟಂ ಎಂದು ಘೋಷಿಸಿದ್ದರು. ಈಗ ಬೆಲ್‌ ಬಾಟಂ ಫಸ್ಟ್‌ ಲುಕ್‌ ವೈರಲ್‌ ಆಗಿದ್ದು, ನೆಟ್ಟಿಗರ ಅಪಾರ ಪ್ರಶಂಸೆ ಗಳಿಸಿದೆ. 

ಕೆಂಪು–ಕಂದು ಮಿಶ್ರಿತ ಸೆಪಿಯೋ ಬಣ್ಣದ ಪೋಸ್ಟರ್‌ನಲ್ಲಿ ಬೆಲ್‌ ಬಾಟಂ ಉಡುಪು ಧರಿಸಿ ಕಾರಿನ ಎದುರು ನಿಂತಿರುವ ಅಕ್ಷಯ್‌, ನೋಡುಗರರನ್ನು ರೆಟ್ರೋ ನೆನಪುಗಳಿಗೆ ಮುಖಾಮುಖಿಯಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಚಿತ್ರದ ಪೊಸ್ಟರ್‌ ಅನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ಅಕ್ಷಯ್‌ ಕುಮಾರ್ ಅವರು, ‘80ರ ದಶಕಕ್ಕೆ ಮರಳಿ ಹೋಗಲು ಸಿದ್ದರಾಗಿ,’ ಎಂದು ಬರೆದುಕೊಳ್ಳುವ ಮೂಲಕ ಅಭಿಮಾನಿಗಳ ಎದೆಬಡಿತವನ್ನು ಹೆಚ್ಚಿಸಿದ್ದಾರೆ. 

ಬೆಲ್‌ ಬಾಟಂ ಫಸ್ಟ್‌ ಲುಕ್‌ ಬಗ್ಗೆ ಪ್ರತಿಕ್ರಿಯಿಸಿರುವ ಅಕ್ಷಯ್ ಅಭಿಮಾನಿಗಳು, ‘ಪೊಸ್ಟರ್‌ ಅದ್ಬುತವಾಗಿದೆ. ಚಿತ್ರವನ್ನು ನೋಡಲು ಕಾತುರನಾಗಿದ್ದೇವೆ.’ ‘ಅಕ್ಷಯ್‌ ಕುಮಾರ್‌ ಅವರು ಪ್ರತಿ ಸಾರಿ ಬರುವಾಗ ಅಚ್ಚರಿಗಳನ್ನೇ ಹೊತ್ತು ತರುತ್ತಾರೆ.’ ಎಂದು ಹೇಳಿದ್ದಾರೆ.

‘ಇದು ಕನ್ನಡದ ಬೆಲ್‌ ಬಾಟಂನ ರಿಮೇಕ್‌ ಚಿತ್ರವೇ?‘ ಎಂಬ ಅಭಿಮಾನಿಯೊಬ್ಬರ ಪ್ರಶ್ನೆಗೆ ಸ್ಪಷ್ಟಣೆ ನೀಡಿರುವ ಅಕ್ಷಯ್‌, ‘ಇದು ಯಾವುದೇ ಚಿತ್ರದ ರಿಮೇಕ್‌ ಅಲ್ಲ. ಸತ್ಯಘಟನೆಗಳ ಆಧಾರಿತ ಚಿತ್ರಕತೆ,’ ಎಂದು ಸ್ಪಷ್ಟಣೆ ನೀಡಿದ್ದಾರೆ.

ಈ ಚಿತ್ರವನ್ನು ನಿಖಿಲ್‌ ಅಡ್ವಾಣಿ ನಿರ್ಮಾಣ ಮಾಡಲಿದ್ದು, ರಂಜಿತ್‌ ತಿವಾರಿ ನಿರ್ದೇಶನ ಮಾಡಲಿದ್ದಾರೆ.

 

ಪ್ರತಿಕ್ರಿಯಿಸಿ (+)