ಸೋಮವಾರ, ಸೆಪ್ಟೆಂಬರ್ 20, 2021
26 °C

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ಗೆ ಮಾತೃವಿಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್‌ ನಟ ಅಕ್ಷಯ್ ಕುಮಾರ್ ಅವರ ತಾಯಿ ಅರುಣಾ ಭಾಟಿಯಾ ಬುಧವಾರ ಬೆಳಿಗ್ಗೆ ಇಲ್ಲಿನ ಹಿರಾನಂದಾನಿ ಆಸ್ಪತ್ರೆಯಲ್ಲಿ ನಿಧನರಾದರು.

ಈ ಕುರಿತು ಟ್ವೀಟ್‌ ಮಾಡಿರುವ ಅಕ್ಷಯ್‌, ‘ಅಮ್ಮ ನನ್ನ ಸ್ಫೂರ್ತಿಯ ಮೂಲ. ಇಂದು ನಾನು ನನ್ನ ಅಸಹನೀಯ ನೋವನ್ನು ಅನುಭವಿಸುತ್ತಿದ್ದೇನೆ. ನನ್ನ ಅಮ್ಮ ಶ್ರೀಮತಿ ಅರುಣಾ ಭಾಟಿಯಾ ಇಂದು ಬೆಳಿಗ್ಗೆ ಶಾಂತಿಯುತವಾಗಿ ಈ ಜಗತ್ತನ್ನು ತೊರೆದರು ಮತ್ತು ಇನ್ನೊಂದು ಜಗತ್ತಿನಲ್ಲಿ ನನ್ನ ತಂದೆಯೊಂದಿಗೆ ಸೇರಿಕೊಂಡರು’ ಎಂದು ಬರೆದಿದ್ದಾರೆ.

ನಾನು ಮತ್ತು ನನ್ನ ಕುಟುಂಬ ಎದುರಿಸುತ್ತಿರುವ ಈ ಸಮಯದಲ್ಲಿ ಮಾಡುತ್ತಿರುವ ಎಲ್ಲರ ಪ್ರಾರ್ಥನೆಯನ್ನು ನಾನು ಗೌರವಿಸುತ್ತೇನೆ ‘ಓಂ ಶಾಂತಿ’ ಎಂದು ಅವರು ಟ್ವೀಟ್‌ ನಲ್ಲಿ ಹೇಳಿದ್ದಾರೆ.

ಅಕ್ಷಯ್‌ ತಮ್ಮ ಹೊಸ ಚಿತ್ರ ‘ಸಿಂಡ್ರೆಲ್ಲಾ’ದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಅಮ್ಮನ ಕಾಳಜಿಗಾಗಿ ಅವರು ಕೆಲಕಾಲ ಬಿಡುವು ಪಡೆದಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು