ಭಾನುವಾರ, ಮೇ 29, 2022
20 °C

RRR: ನರ್ವಸ್‌ ಆಗಿದ್ರಂತೆ ಆಲಿಯಾ ಭಟ್‌, ತೆಲುಗು ಕಲಿಯಲು 1.3 ವರ್ಷ ಬೇಕಾಯಿತಂತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾನು ದಕ್ಷಿಣ ಭಾರತದ ಚಿತ್ರರಂಗಕ್ಕೆ ಹೊಸಬಳು. ಆರ್‌ಆರ್‌ಆರ್‌ ಚಿತ್ರಕ್ಕೆ ಪ್ರವೇಶ ಪಡೆದಾಗ ಮೊದಲು ತುಂಬಾ ನರ್ವಸ್‌ ಆಗಿದ್ದೆ. 

ಇದು ಆರ್‌ಆರ್‌ಆರ್‌ ಚಿತ್ರದ ನಾಯಕಿ ಆಲಿಯಾ ಭಟ್‌ ಮಾತು. ಆರ್‌ಆರ್‌ಆರ್‌ ಚಿತ್ರದ ಟ್ರೇಲರ್‌ ಬಿಡುಗಡೆಯ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ನನಗೆ ತೆಲುಗು ಗೊತ್ತಿರಲಿಲ್ಲ. ಆ ಭಾಷೆ, ಉಚ್ಛಾರ ಕಲಿಯಲು ಒಂದು ವರ್ಷ ಮೂರು ತಿಂಗಳು ಬೇಕಾಯಿತು. ಮುಂದೆ ಕಲಿಯುತ್ತಾ ಸೆಟ್‌ಗೆ ಹೋದಾಗ ಎಲ್ಲವೂ ಸರಳ ಅನಿಸಿತು’ ಎಂದರು ಆಲಿಯಾ.

‘ನಿರ್ದೆಶಕರು (ರಾಜಮೌಳಿ) ಕತೆಯನ್ನು ತುಂಬಾ ಪ್ರೀತಿಸುತ್ತಾರೆ. ಅವರೊಂದಿಗೆ ಕೆಲಸ ಮಾಡುವುದೆಂದರೆ ಕಲಿಯುತ್ತಾ ಹೋಗುವ ಅನುಭವ’ ಎಂದರು ಅವರು.

ನನಗೆ ಈ ಚಿತ್ರವನ್ನು ತೆರೆಯ ಮೇಲೆ ನೋಡುವ ಕಾತರ ಹೆಚ್ಚಾಗಿದೆ. ಹಾಗಾಗಿ ನಾನೂ ಕಾಯುತ್ತಿದ್ದೇನೆ ಎಂದು ಮಾತು ಮುಗಿಸಿದರು ಆಲಿಯಾ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು