ಗುರುವಾರ , ಆಗಸ್ಟ್ 18, 2022
25 °C

‘ಗಂಗೂಬಾಯಿ ಕಾಠಿಯಾವಾಡಿ’ ವಿಶೇಷ ಪ್ರದರ್ಶನಕ್ಕೆ ಬಾಲಿವುಡ್‌ ತಾರೆಗಳ ದಂಡು

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ಗಂಗೂಬಾಯಿ ಕಾಠಿಯಾವಾಡಿ ಚಿತ್ರವು ಶುಕ್ರವಾರ ತೆರೆಕಾಣಲಿದೆ. ಆ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಮುಂಬೈನಲ್ಲಿ ಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು.  

ಚಿತ್ರದ ನಾಯಕಿ ಆಲಿಯಾ ಭಟ್ ಹಾಗೂ ನಟಿ ದೀಪಿಕಾ ಪಡುಕೋಣೆ ಅವರು ಗಂಗೂಬಾಯಿಯ ಉಡುಪನ್ನು ಹೋಲುವ ಬಿಳಿ ಬಣ್ಣದ ಸೀರೆಯುಟ್ಟು ಚಿತ್ರಮಂದಿರಕ್ಕೆ ಆಗಮಿಸಿದ್ದರು. 

ಬಾಲಿವುಡ್‌ ತಾರೆಗಳಾದ ರೇಖಾ, ಸಾರಾ ಅಲಿ ಖಾನ್‌, ಕೃತಿ ಸನೊನ್‌, ವಿಕ್ಕಿ ಕೌಶಲ್‌, ಅನನ್ಯಾ ಪಾಂಡೆ, ರಿತೇಶ್‌ ದೇಶಮುಖ್‌ ಸೇರಿದಂತೆ ಹಲವರು ವಿಶೇಷ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. 

ಗಂಗೂಬಾಯಿ ಕಾಠಿಯಾವಾಡಿ ಚಿತ್ರವು ಫೆಬ್ರುವರಿ 25ರಂದು ತೆರೆಗೆ ಬರಲಿದೆ. ಮುಂಬೈನ ಕಾಮಾಟಿಪುರದ ವೇಶ್ಯೆಯರು ಹಾಗೂ ಅವರ ಮಕ್ಕಳ ಹಕ್ಕುಗಳಿಗಾಗಿ ಹೋರಾಡುವ ಗಂಗೂಬಾಯಿಯ ಜೀವನವನ್ನು ಆಧರಿಸಿ ಚಿತ್ರವನ್ನು ತಯಾರಿಸಲಾಗಿದೆ.

ಈ ಚಿತ್ರದಲ್ಲಿ ಸೀಮಾ ಫಹ್ವಾ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅತಿಥಿ ಪಾತ್ರದಲ್ಲಿ ನಟ ಅಜಯ್‌ ದೇವಗನ್‌ ಮತ್ತು ಹುಮಾ ಖುರೇಷಿ ಕಾಣಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು