ಬೆಂಗಳೂರು: ಬಾಲಿವುಡ್ ಬೆಡಗಿ ನಟಿ ಆಲಿಯಾ ಭಟ್ ನಿನ್ನೆಯಷ್ಟೇ (ಮಾರ್ಚ್ 15) ತಮ್ಮ 29 ನೇ ಜನ್ಮದಿನದ ಸಂತಸದಲ್ಲಿದ್ದರು. ಆಲಿಯಾ ಜನ್ಮದಿನಕ್ಕೆ ಚಿತ್ರರಂಗದವರು ಸೇರಿದಂತೆ ಅನೇಕ ಅಭಿಮಾನಿಗಳು, ಗಣ್ಯರು ಶುಭಾಶಯದ ಸುರಿಮಳೆ ಸುರಿಸಿದ್ದರು.

ಜನ್ಮದಿನಕ್ಕೆ ಆಲಿಯಾ ಮುಂಬೈನಲ್ಲಿರಲಿಲ್ಲ. ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ಸಕ್ಸಸ್‌ನ ನಂತರ ಅವರು ಸದ್ಯ ವಿಶ್ರಾಂತಿಯಲ್ಲಿದ್ದು, ತನ್ನ ತಾಯಿ ಸೋನಿ ರಾಜ್‌ಧಾನ್ ಹಾಗೂ ಅಕ್ಕ ಶಾಹೀನ್ ಭಟ್ ಜೊತೆ ದೂರದ ಮಾಲ್ಡಿವ್ಸ್‌ಗೆ ತೆರಳಿದ್ದರು.

ಅದ್ಧೂರಿ ಜನ್ಮದಿನದ ಆಚರಣೆ ಬದಲು ಆಲಿಯಾ ತನ್ನ ತಾಯಿ ಹಾಗೂ ಅಕ್ಕನ ಜತೆ ಸಮಯ ಕಳೆದು ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದ್ದಾರೆ.

ಬೀಚ್‌ನಲ್ಲಿ ಸುತ್ತಾಟ, ಬೋಟಿಂಗ್, ಇಷ್ಟದ ತಿನಿಸುಗಳನ್ನು ತಿಂದು, ‘ಫ್ರೆಂಡ್ಸ್’ಎಂಬ ವೆಬ್ ಸಿರೀಸ್ ನೋಡಿ ಆಲಿಯಾ ಜನ್ಮದಿನ ಕಳೆದಿದ್ದಾರೆ.

ಈ ವೇಳೆ ಅವರು ಇನ್‌ಸ್ಟಾಗ್ರಾಂನಲ್ಲಿ ತಮ್ಮ ಹುಟ್ಟುಹಬ್ಬದ ಸಂತಸವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಲ್ಲದೇ ತನ್ನ ತಾಯಿ ಮತ್ತು ಅಕ್ಕಳ ಒಡನಾಟ ನನಗೆ ಅತ್ಯಂತ ಖುಷಿ ಕೊಟ್ಟಿದೆ ಎಂದು ಅವರನ್ನು ಕೊಂಡಾಡಿದ್ದಾರೆ.

ಸದ್ಯ ಗಂಗೂಬಾಯಿ ಯಶಸ್ಸಿನಲ್ಲಿರುವ ಆಲಿಯಾ, ತಮ್ಮ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಆರ್‌ಆರ್‌ಆರ್ ನ್ನು ಎದುರು ನೋಡುತ್ತಿದ್ದಾರೆ. ಈ ಸಿನಿಮಾ ಇದೇ ಮಾರ್ಚ್ 25 ಕ್ಕೆ ಬಿಡುಗಡೆಯಾಗಲಿದೆ. ಇನ್ನು ಬ್ರಹ್ಮಾಸ್ತ್ರ ಸಿನಿಮಾದಲ್ಲಿ ಸದ್ಯಕ್ಕೆ ತೊಡಗಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.