ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹೇಶ್‌ಬಾಬು ಮಗಳನ್ನು ನೋಡಿ ಥ್ರಿಲ್‌ ಆದ ಆಲಿಯಾ

Last Updated 23 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

ಬಾಲಿವುಡ್‌ನ ಆಲಿಯಾ ಭಟ್‌ ಬಿಡುವಿರದ ಕೆಲಸಗಳ ಮಧ್ಯೆ ಸ್ವಲ್ಪ ವಿರಾಮ‍ಪಡೆದು ಪ್ರಿಯತಮ ರಣಬೀರ್‌ ಕಪೂರ್‌ ಜತೆ ಕಾಲ ಕಳೆಯಲು ನ್ಯೂಯಾರ್ಕ್‌ಗೆ ಹಾರಿದ್ದರು. ಅಲ್ಲಿ ತಾಜ್‌ ಹೋಟೆಲ್‌ನಲ್ಲಿ ಕಾಲ ಕಳೆಯುತ್ತಿದ್ದ ಆಲಿಯಾಗೆ ಅಚ್ಚರಿ ಕಾದಿತ್ತು. ನ್ಯೂಯಾರ್ಕ್‌ನ ಇನ್ನೊಂದು ತುದಿಯಿಂದ ಬಂದಿದ್ದ ಪುಟಾಣಿ ಅಭಿಮಾನಿಯನ್ನು ಕಂಡು ಅವರು ಥ್ರಿಲ್‌ ಆಗಿದ್ದರು.

ಆ ಪುಟಾಣಿ ಯಾರು ಗೊತ್ತೇ? ಟಾಲಿವುಡ್‌ನ ಸೂಪರ್‌ಸ್ಟಾರ್‌ ಮಹೇಶ್‌ಬಾಬು ಮಗಳು ಸಿತಾರಾ! ನಿಜ, ಸಿತಾರಾಗೆ ಆಲಿಯಾ ಅಂದರೆ ಅಚ್ಚುಮೆಚ್ಚು ಅಂತೆ. ಹಾಗಾಗಿ ಮಗಳನ್ನು ನಿರಾಸೆಗೊಳಿಸಲಾರದೆ ಮಹೇಶ್‌ ಪತ್ನಿ ನಮ್ರತಾ ಶಿರೋಡ್ಕರ್‌ ತಾಜ್‌ ಹೋಟೆಲ್‌ಗೆ ಕರೆತಂದಿದ್ದರು.

ಈ ಬಗ್ಗೆ ಟ್ವೀಟ್‌ ಮಾಡಿರುವ ಮಾಜಿ ರೂಪದರ್ಶಿ ನಮ್ರತಾ, ‘ಆಲಿಯಾ, ನನ್ನ ಮಗಳ ಮುಖದಲ್ಲಿ ಅಂತಹುದೊಂದು ನಗು ಮೂಡಿಸಿದ್ದಕ್ಕೆ ದೊಡ್ಡ ಥ್ಯಾಂಕ್ಸ್‌’ ಎಂದು ಬರೆದುಕೊಂಡಿದ್ದಾರೆ.

ಮಹೇಶ್‌ಬಾಬು ಪ್ರಸ್ತುತ ನ್ಯೂಯಾರ್ಕ್‌ನಲ್ಲಿ ‘ಮಹರ್ಷಿ’ ಚಿತ್ರದ ನಾಯಕಿ ಪೂಜಾ ಹೆಗ್ಡೆ ಜೊತೆಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮಹತ್ವದ ಸನ್ನಿವೇಶಗಳನ್ನು ಅಲ್ಲಿ ಚಿತ್ರೀಕರಿಸಲಾಗುತ್ತಿದೆ. ಇತ್ತ ಆಲಿಯಾ ತಮ್ಮ ಪ್ರಿಯತಮ ರಣಬೀರ್‌ ಕಪೂರ್ ಮತ್ತು ಅವರ ಕುಟುಂಬದೊಂದಿಗೆ ಕಾಲ ಕಳೆಯಲು ನ್ಯೂಯಾರ್ಕ್‌ಗೆ ಭೇಟಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT