ಗುರುವಾರ , ಡಿಸೆಂಬರ್ 5, 2019
24 °C

ಮತ್ತೆ ನಿರ್ಮಾಣದತ್ತ ಅಲ್ಲು ಅರವಿಂದ್

Published:
Updated:
Prajavani

1980ರ ಕಾಲದಲ್ಲಿ ನಟ ಚಿರಂಜೀವಿ ಮೆಗಾಸ್ಟಾರ್ ಎನ್ನಿಸಿಕೊಂಡಾಗ ಅಲ್ಲು ಅರವಿಂದ್ ತಾನು ಮೆಗಾ ನಿರ್ಮಾಪಕ ಆಗಬೇಕು ಎಂದುಕೊಂಡವರು. ಇಂತಿಪ್ಪ ಅಲ್ಲು ಅರವಿಂದ್ ಚಿರಂಜೀವಿ ಮಗ ರಾಮ್ ಚರಣ್ ಹಾಗೂ ಅಳಿಯ ಸಾಯಿ ಧರ್ಮ ತೇಜರಿಗಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಆದರೆ ಅರವಿಂದ್ ನಟ ವರುಣ್ ತೇಜ್‌ಗಾಗಿ ಯಾವುದೇ ಸಿನಿಮಾ ನಿರ್ಮಾಣ ಮಾಡಿಲ್ಲ. ಈ ನಡುವೆ ಸ್ಟಾರ್‌ ನಿರ್ಮಾಪಕ ಪ್ರಸ್ತುತ ಚಿತ್ರರಂಗದ ವ್ಯವಹಾರಗಳ ಬಗ್ಗೆ ಅರಿಯುವ ಸಲುವಾಗಿ ಕೆಲ ಕಾಲ ನಿರ್ಮಾಣದಿಂದ ಬಿಡುವು ಪಡೆದುಕೊಂಡಿದ್ದರು.   

ಈಗ ಮತ್ತೆ ಸಿನಿಮಾ ನಿರ್ಮಾಣಕ್ಕೆ ಮುಂದಾಗಿರುವ ಅಲ್ಲು ಅರವಿಂದ್ ಸಾಯಿ ಧರ್ಮ ತೇಜಗಾಗಿ ಇನ್ನೊಂದು ಸಿನಿಮಾ ಮಾಡುತ್ತಿರುದಾಗಿ ಘೋಷಿಸಿದ್ದಾರೆ. ಈ ಹಿಂದೆ ಪಿಲ್ಲಾ ನುವ್ವು ಲೇನಿ ಜೀವಿತಂ ಎಂಬ ಸಿನಿಮಾದಲ್ಲಿ ಈ ಜೋಡಿ ಒಟ್ಟಾಗಿ ಕೆಲಸ ಮಾಡಿತ್ತು. ಇದರೊಂದಿಗೆ ವರುಣ್ ತೇಜರೊಂದಿಗೆ ಸಿನಿಮಾ ಮಾಡುವ ಯೋಜನೆಯೂ ಇವರ ಮನಸ್ಸಿನಲ್ಲಿದೆ. ಇದರೊಂದಿಗೆ ಮೆಗಾಸ್ಟಾರ್ ಚಿರಂಜೀವಿ ಸಿನಿಮಾವೊಂದಕ್ಕೆ ನಿರ್ಮಾಣ ಮಾಡುವ ಮಾತುಕತೆಯನ್ನೂ ನಡೆಸಿದ್ದಾರೆ ಎನ್ನುತ್ತಿದೆ ಮೂಲಗಳು.  

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು