ಮಂಗಳವಾರ, ಏಪ್ರಿಲ್ 7, 2020
19 °C

'ಬುಟ್ಟ ಬೊಮ್ಮಾ' ಹಾಡಿಗೆ ಕುಣಿದ ಆನೆ: ಅಲ್ಲು ಅರ್ಜುನ್ ಅಭಿಮಾನಿಯ ವಿಡಿಯೊ ವೈರಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ತೆಲುಗಿನ ಸ್ಟೈಲಿಶ್‌ಸ್ಟಾರ್‌ ಅಲ್ಲು ಅರ್ಜುನ್ ಅಭಿನಯದ ‘ಅಲಾ ವೈಕುಂಠಪುರಮುಲೋ’ ಚಿತ್ರದ 'ಬುಟ್ಟ ಬೊಮ್ಮಾ' ಹಾಡಿಗೆ ಆನೆ ಹೆಜ್ಜೆ ಹಾಕಿರುವುದು ವೈರಲ್‌ ಆಗಿದೆ.

ಇತ್ತೀಚೆಗೆ ಬಿಡುಗಡೆಯಾಗಿದ ಅಲಾ ವೈಕುಂಠಪುರಮುಲೋ ಸಿನಿಮಾ ಮಾಸ್‌ ಹಿಟ್‌ ಆಗಿದ್ದು ಅಲ್ಲು ಅರ್ಜುನ್‌ ಅವರಿಗೆ ಹೊಸ ಬ್ರೇಕ್‌ ನೀಡಿದೆ. ತಮನ್‌ ಸಂಗೀತ ಸಂಯೋಜಿಸಿರುವ ಈ ಸಿನಿಮಾದ ಹಾಡುಗಳು ಕೂಡ ಸಖತ್ ಹಿಟ್‌ ಆಗಿದ್ದವು.

ಅಲ್ಲು ಅರ್ಜುನ್‌ ಅಭಿಮಾನಿಯೊಬ್ಬ ಬುಟ್ಟ ಬೊಮ್ಮಾ ಹಾಡಿಗೆ ಹೆಜ್ಜೆ ಹಾಕಿ ಟಿಕ್‌ ಟಾಕ್‌ ವಿಡಿಯೊ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಅಲ್ಲು ಅಭಿಮಾನಿ ಹೆಜ್ಜೆ ಹಾಕುತ್ತಿದ್ದರೆ ಹಿಂಬಂದಿಯಲ್ಲಿದ್ದ ಆನೆ ಕೂಡ ಸೊಂಡಿಲು ಆಡಿಸುತ್ತ ಹೆಜ್ಜೆ ಹಾಕುತ್ತದೆ. ಈ ವಿಡಿಯೊಗೆ ಅಲ್ಲು ಅಭಿಮಾನಿಗಳು ಫಿದಾ ಆಗಿದ್ದು ಲಕ್ಷಾಂತರ ಜನರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. 

ಬುಟ್ಟ ಬೊಮ್ಮಾ ವಿಡಿಯೊ ಸಾಂಗ್‌ ಯುಟ್ಯೂಬ್‌ನಲ್ಲಿ 4 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ‘ಮಾತಿನ ಮಾಂತ್ರಿಕ’ ಎಂದೇ ಖ್ಯಾತರಾಗಿರುವ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್‌ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. 

ನೆಟ್ಟಿಗರು ಮನಗೆದ್ದಿರುವ ಆನೆ ನೃತ್ಯದ ವಿಡಿಯೊಗೆ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)