‘ಪುಷ್ಪ’, ‘ಪುಷ್ಪ - 2’ ಚಿತ್ರದ ಬಳಿಕ ಅಲ್ಲು ಅರ್ಜುನ್ ಮಾರುಕಟ್ಟೆ ಬದಲಾಗಿದೆ. ಪ್ಯಾನ್ ಇಂಡಿಯಾಕ್ಕಿಂತಲೂ ದೊಡ್ಡದಾದ ಸಿನಿಮಾಗಳನ್ನೇ ಎದುರು ನೋಡುತ್ತಿರುವ ಅಲ್ಲು ಅರ್ಜುನ್, ತಮ್ಮ ಮುಂದಿನ ಚಿತ್ರಕ್ಕಾಗಿ ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಜೊತೆ ಕೈಜೋಡಿಸಿದ್ದಾರೆ. ಅಟ್ಲಿ ನಿರ್ದೇಶನದಲ್ಲಿ ಶಾರೂಕ್ ಖಾನ್ ಅಭಿನಯದ ‘ಜವಾನ್’ ಚಿತ್ರ ಸೂಪರ್ ಹಿಟ್ ಎನಿಸಿಕೊಂಡಿತ್ತು. ಇದರ ಬಳಿಕ ಅಟ್ಲಿ ಬಾಲಿವುಡ್ನಲ್ಲಿ ಬಹುಬೇಡಿಕೆಯ ನಿರ್ದೇಶಕರಾಗಿದ್ದಾರೆ.

ಅಟ್ಲಿ ಮತ್ತು ಸಲ್ಮಾನ್ ಖಾನ್ ಜೋಡಿಯ ಬೃಹತ್ ಬಜೆಟ್ನ ಸಿನಿಮಾವೊಂದು ಸೆಟ್ಟೇರಲಿದೆ ಎಂದು ಸುದ್ದಿಯಾಗಿತ್ತು. ಆದರೆ ಆ ಸಿನಿಮಾವಿನ್ನೂ ಅಧಿಕೃತವಾಗಿ ಘೋಷಣೆಗೊಂಡಿಲ್ಲ. ರಜನಿಕಾಂತ್ ಕೂಡ ನಟಿಸುತ್ತಾರೆ ಎಂಬ ವದಂತಿ ಇರುವ ಈ ಚಿತ್ರ ಬಜೆಟ್ ಸಮಸ್ಯೆಯಿಂದಾಗಿ ಇನ್ನೂ ಸೆಟ್ಟೇರಿಲ್ಲ ಎಂದು ಹಿಂದಿ ಮಾಧ್ಯಮಗಳು ವರದಿ ಮಾಡಿವೆ. ಅದರ ಬೆನ್ನಲ್ಲೇ ಸನ್ ಪಿಕ್ಚರ್ಸ್ ನಿರ್ಮಾಣದಲ್ಲಿ ಅಟ್ಲಿ–ಅಲ್ಲು ಅರ್ಜುನ್ ಸಿನಿಮಾ ಘೋಷಣೆಗೊಂಡಿದೆ.

‘ಸದ್ಯ ಚಿತ್ರಕ್ಕೆ #ಎಎ22 ಎಂದು ಹೆಸರಿಡಲಾಗಿದೆ. ಇದು ಅಲ್ಲು ಅರ್ಜುನ್ ಅವರ ಇಪ್ಪತ್ತೆರಡನೆ ಚಿತ್ರ. ನಿರ್ದೇಶಕ ಅಟ್ಲಿ ಅವರ ಆರನೇ ಚಿತ್ರ. ವೈಜ್ಞಾನಿಕ ಕಥೆಯೊಂದಿಗಿನ ಆ್ಯಕ್ಷನ್ ಚಿತ್ರ ಇದಾಗಿದ್ದು, ಭಾರತ ಮತ್ತು ಅಮೆರಿಕದ ಪ್ರತಿಷ್ಠಿತ ಸ್ಟುಡಿಯೋಗಳಲ್ಲಿ ಚಿತ್ರದ ವಿಎಫ್ಎಕ್ಸ್ ಕೆಲಸ ನಡೆಯುತ್ತಿದೆ’ ಎಂದು ಕಲಾನಿಧಿ ಮಾರನ್ ಒಡೆತನದ ಸನ್ ಪಿಕ್ಚರ್ಸ್ ಪ್ರಕಟಣೆ ತಿಳಿಸಿದೆ.

‘ಸ್ಪೈಡರ್ ಮ್ಯಾನ್’, ‘ಅವೆಂಜರ್ಸ್’ನಂತಹ ಚಿತ್ರಗಳಿಗೆ ಕೆಲಸ ಮಾಡಿದ್ದ ಅಮೆರಿಕದ ಐರನ್ಹೆಡ್ ಸ್ಟುಡಿಯೊ ಅಲ್ಲು ಅರ್ಜುನ್ ಚಿತ್ರದ ಗ್ರಾಫಿಕ್ಸ್ ಕೆಲಸ ಮಾಡುತ್ತಿದೆ. ಹೀಗಾಗಿ ಚಿತ್ರದ ಕುರಿತು ನಿರೀಕ್ಷೆ ಹೆಚ್ಚಾಗಿದೆ. ಯಶ್ ನಟನೆಯ ‘ಟಾಕ್ಸಿಕ್’ ಕನ್ನಡದ ಜೊತೆಗೆ ಇಂಗ್ಲಿಷ್ನಲ್ಲಿ ನಿರ್ಮಾಣಗೊಳ್ಳುತ್ತಿದೆ. ಇದರಲ್ಲಿಯೂ ಹಾಲಿವುಡ್ ತಂತ್ರಜ್ಞರು ತೊಡಗಿಸಿಕೊಂಡಿದ್ದಾರೆ. ಇದೀಗ ಅಲ್ಲು ಅರ್ಜುನ್ ಕೂಡ ಹಾಲಿವುಡ್ ಸಂಸ್ಥೆಗಳೊಂದಿಗೆ ಕೈಜೋಡಿಸಿ ಪ್ಯಾನ್ ಇಂಡಿಯಾಕ್ಕಿಂತ ದೊಡ್ಡದಾದ ಹೆಜ್ಜೆ ಇಟ್ಟಿದ್ದಾರೆ. ಇದರೊಂದಿಗೆ ದೇಶದ ಸೂಪರ್ ಸ್ಟಾರ್ಗಳು ಪ್ಯಾನ್ ಇಂಡಿಯಾ ಜೊತೆಗೆ ಹಾಲಿವುಡ್ ಅನ್ನೂ ಗಮನದಲ್ಲಿಟ್ಟುಕೊಂಡು ಸಿನಿಮಾಗಳಿಗೆ ಕೈ ಹಾಕುತ್ತಿರುವ ಪರಿಪಾಠ ಶುರುವಾದಂತಾಗಿದೆ. ಅಲ್ಲು ಅರ್ಜುನ್ಗೆ ನಟಿ ಸಮಂತಾ ನಾಯಕಿಯಾಗಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.