ಜನಪ್ರಿಯತೆಯ ಪಟ್ಟಿಯಲ್ಲಿ ಟಾಲಿವುಡ್‌ನಲ್ಲಿ ಅಲ್ಲು ಅರ್ಜುನ್ ನಂಬರ್ ಒನ್ ಸ್ಥಾನದಲ್ಲಿದ್ದಾರಂತೆ. ಮಹೇಶ್ ಬಾಬು, ಪ್ರಭಾಸ್‌ರಂತಹ ಜನಪ್ರಿಯ ನಾಯಕರನ್ನು ಹಿಂದೆ ಹಾಕಿರುವ ಬನ್ನಿ ಮೊದಲ ಸ್ಥಾನಕ್ಕೇರಿದ್ದಾರಂತೆ. ಹೀಗೆಂದು ಹೇಳುತ್ತಿದೆಆನ್‌ಲೈನ್ ಸಂಶೋಧನಾ ಮಾಧ್ಯಮ ಓರ್ಮ್ಯಾಕ್ಸ್ ಮೀಡಿಯಾ.

ಈ ವರ್ಷದ ಒಂದೇ ಒಂದು ಬ್ಲಾಕ್‌ಬಸ್ಟರ್ ಸಿನಿಮಾ ಟಾಲಿವುಡ್ ತಾರಾ ಪಟ್ಟದ ಸಮೀಕರಣವನ್ನೇ ಬದಲಿಸ್ತಾ? ಆ ಒಂದು ಸಿನಿಮಾದ ಯಶಸ್ಸು ಅಲ್ಲು ಅರ್ಜುನ್ ಸ್ಟಾರ್ ರೇಟಿಂಗ್ ಅನ್ನು ಹೆಚ್ಚಿಸ್ತಾ? ಸದಾ ನಂಬರ್ ಒನ್ ಸ್ಥಾನದಲ್ಲಿರುತ್ತಿದ್ದ ಪವನ್ ಕಲ್ಯಾಣ್, ಪ್ರಭಾಸ್ ಹಾಗೂ ಮಹೇಶ್ ಬಾಬು ಅವರನ್ನು ಅಲ್ಲು ಹಿಂದಿಕ್ಕಿದ್ದಾರಾ? ಎಂಬೆಲ್ಲಾ ಪ್ರಶ್ನೆಗಳು ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ಆದರೆ ಈ ಪ್ರಶ್ನೆಗಳಿಗೆಲ್ಲಾ ಹೌದು, ಅದು ನಿಜ ಎಂಬ ಉತ್ತರ ನೀಡಿದೆ ಓರ್ಮ್ಯಾಕ್ಸ್ ಮೀಡಿಯಾ.ಭಾರತೀಯ ಚಲನಚಿತ್ರ ತಾರೆಯರ ಜನಪ್ರಿಯತೆ ಮತ್ತು ಚಲನಚಿತ್ರಗಳ ವ್ಯಾಪ್ತಿಯ ಬಗ್ಗೆ ನಿಯಮಿತವಾಗಿ ಆನ್‌ಲೈನ್ ಸಮೀಕ್ಷೆಗಳನ್ನು ನಡೆಸುವ ಆನ್‌ಲೈನ್ ಸಂಶೋಧನಾ ಮಾಧ್ಯಮವಾದ ಓರ್ಮ್ಯಾಕ್ಸ್ ಮೀಡಿಯಾ, ಅಲ್ಲು ಅರ್ಜುನ್ ಈಗ ಜನಪ್ರಿಯತೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ ಎಂದು ತಿಳಿಸಿದೆ.

ಮೇ 2020ರ ಸಮೀಕ್ಷೆ ಫಲಿತಾಂಶದ ಪ್ರಕಾರ ಅಲ್ಲು ಅರ್ಜುನ್ ಟಾಲಿವುಡ್‌ನಲ್ಲಿ ಜನಪ್ರಿಯ ನಟ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.

ಮಹೇಶ್ ಬಾಬು ಹಾಗೂ ಪ್ರಭಾಸ್ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ. ಅವರ ನಂತರದ ಸ್ಥಾನದಲ್ಲಿ ಪವನ್ ಕಲ್ಯಾಣ್, ಜೂನಿಯರ್ ಎನ್‌ಟಿಆರ್, ಚಿರಂಜೀವಿ, ನಾನಿ ಹಾಗೂ ರಾಮ್ ಚರಣ್ ಸ್ಥಾನ ಪಡೆದಿದ್ದಾರೆ.

ಬನ್ನಿ ಅಭಿನಯದ ‘ಅಲಾ ವೈಕುಂಟಪುರಮುಲೋ’ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ಜೊತೆಗೆ ಈ ಚಿತ್ರವನ್ನು ನೆಟ್‌ಫ್ಲಿಕ್ಸ್‌ನಲ್ಲೂ ಬಿಡುಗಡೆ ಮಾಡಿದ್ದು ಅಲ್ಲು ಅರ್ಜುನ್ ಜನಯಪ್ರಿಯತೆಯ ವರ್ಚಸ್ಸು ಇನ್ನಷ್ಟು ಹೆಚ್ಚಿಸುವಂತೆ ಮಾಡಿತ್ತು.

ಅಲ್ಲದೇ ಕೋವಿಡ್-19 ಕಾರಣದಿಂದ 2020 ಆರಂಭದಿಂದ ಇಲ್ಲಿಯವರೆಗೆ ಯಾವುದೇ ಟಾಪ್ ನಟರ ಸಿನಿಮಾಗಳು ಬಿಡುಗಡೆಯಾಗಿಲ್ಲ. ಅದು ಕೂಡ ಅಲ್ಲು ಅರ್ಜುನ್ ಯಶಸ್ಸು ಹೆಚ್ಚಲು ಕಾರಣವಾಗಿದೆ ಎನ್ನಬಹುದು.

ಅಲಾ ವೈಕುಂಟಪುರಮುಲೋ ಸಿನಿಮಾದ ಯಶಸ್ಸು ಅಲ್ಲು ಅರ್ಜುನ್ ನಟನಾ ಪಯಣಕ್ಕೆ ಮೈಲುಗಲ್ಲು ಸ್ಥಾಪಿಸಿದ ಸಿನಿಮಾ ಎನ್ನಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.