‘ಆಹಾ’ ಹೆಸರಿನ ಫ್ಯಾಂಟಸಿ ಥ್ರಿಲ್ಲರ್ಗೆ ಸಜ್ಜಾಗಿದ್ದಾರೆ ಪವನ್ ಕುಮಾರ್ ಮತ್ತು ಅಮಲಾ ಪೌಲ್. ಈ ಮೊದಲು ಪವನ್ ಕುಮಾರ್ ಅವರು ‘ಯು ಟರ್ನ್’ ಹೆಸರಿನ ಕುತೂಹಲಕಾರಿ ಥ್ರಿಲ್ಲರ್ ಚಿತ್ರನಿರ್ದೇಶನದ ಮೂಲಕ ಗುರುತಿಸಿಕೊಂಡಿದ್ದರು.. ಆ ಚಿತ್ರ ಭರ್ಜರಿ ಯಶಸ್ಸನ್ನೂ ಗಳಿಸಿತ್ತು. ಅದರಲ್ಲಿ ಸಮಂತಾ ಅಕ್ಕಿನೇನಿ ಪ್ರಮುಖ ಪಾತ್ರದಲ್ಲಿದ್ದರು.

ಈಗ ‘ಆಹಾ’ ಫ್ಯಾಂಟಸಿ ಥ್ರಿಲ್ಲರನ್ನು ಒಟಿಟಿ ವೇದಿಕೆಗಾಗಿ ನಿರ್ಮಿಸಲಾಗುತ್ತಿದೆ. ಅಮಲಾ ಪೌಲ್ ಈ ಸರಣಿಯಲ್ಲಿ ಚಾಣಾಕ್ಷ ತನಿಖಾಧಿಕಾರಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಸರಣಿ 8 ಕಂತುಗಳಲ್ಲಿ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾಗಲಿದೆ.

ಆರಂಭದಲ್ಲಿ ಈ ಸರಣಿಯನ್ನು ಮಹೇಶ್ ಭಟ್ ಅವರೇ ಚಿತ್ರಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. 70ರ ದಶಕದಲ್ಲಿ ಖ್ಯಾತ ಸಿನಿಮಾ ನಿರ್ಮಾಪಕ ಮತ್ತು ನಟಿಯೊಬ್ಬರ ಪ್ರೇಮ ಕಥೆಯನ್ನು ಆಧರಿಸಿ ಈ ಸರಣಿ ಮೂಡಿ ಬರುತ್ತಿದೆ.

ಈ ಸರಣಿ ಕುರಿತು ಪ್ರತಿಕ್ರಿಯಿಸಿದ ಅಮಲಾ, ‘ಬೇರೆ ಭಾಷೆಯಲ್ಲಿ ಚಿತ್ರಿಸುವಾಗ ನನಗೆ ಆ ಭಾಷೆಯ ಪರಿಪೂರ್ಣ ಜ್ಞಾನ ಇರಬೇಕು. ಆದ್ದರಿಂದ ಚಿತ್ರೀಕರಣದ ಮೊದಲು ನನ್ನ ಭಾಷಾ ಪರಿಪೂರ್ಣತೆ ಸಾಧಿಸಲು ಪ್ರಯತ್ನಿಸುತ್ತೇನೆ’ ಎಂದಿದ್ದಾರೆ. ಈ ಸರಣಿ ಮುಂದಿನ ವರ್ಷ ಬಿಡುಗಡೆ ಆಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.