ಅವಳನ್ನು ಮನೆಗೆ ಕರೆದುಕೊಂಡು ಹೋಗಬೇಕೆಂದಿದ್ದೆ.. ಆದರೆ..: ಅಮಿತಾಭ್ ಬಚ್ಚನ್

ಬೆಂಗಳೂರು: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್‌ಗೆ ನಾಯಿ ಎಂದರೆ ಪಂಚಪ್ರಾಣ.. ಶ್ವಾನ ಕುರಿತ ಪ್ರೀತಿಯನ್ನು ಅವರು ಸಾಮಾಜಿಕ ತಾಣಗಳ ಮೂಲಕ ಆಗಾಗ ವ್ಯಕ್ತಪಡಿಸುತ್ತಾರೆ.
ಅದೇ ರೀತಿಯಲ್ಲಿ ಈ ಬಾರಿ ಅಮಿತಾಭ್ ಬಚ್ಚನ್, ಪುಟ್ಟ ಗೋಲ್ಡನ್ ರಿಟ್ರೀವರ್ ನಾಯಿಮರಿಯ ಜತೆಗೆ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದಾರೆ.
ಸೆಟ್‌ನಲ್ಲಿ ಇವಳು ನನ್ನ ಬೆಸ್ಟ್ ಜತೆಗಾತಿ.. ನನ್ನ ಕೈಗಳಲ್ಲಿ ಇವಳು ತುಂಬಾ ಆರಾಮವಾಗಿ ಇರುತ್ತಾಳೆ. ಅವಳನ್ನು ಮನೆಗೆ ಕರೆದುಕೊಂಡು ಹೋಗಬೇಕೆಂದಿದ್ದೆ.. ಆದರೆ.. ಎಂಬ ಅಡಿಬರಹ ನೀಡಿದ್ದಾರೆ ಅಮಿತಾಭ್ ಬಚ್ಚನ್.
ಅಲ್ಲದೆ, ಆ ಬಗ್ಗೆ ತಮ್ಮ ಅಧಿಕೃತ ಬ್ಲಾಗ್‌ನಲ್ಲಿ ಅಮಿತಾಭ್ ಬಚ್ಚನ್ ಬರೆದುಕೊಂಡಿದ್ದು, ಮನೆಗೆ ತಂದರೆ ಕೆಲವು ಸಮಯದ ಬಳಿಕ ಸಾಕುಪ್ರಾಣಿಗಳು ಸಾವನ್ನಪ್ಪುತ್ತವೆ ಎಂಬ ಚಿಂತೆಯಿದೆ. ಅದಕ್ಕಾಗಿ ಮನೆಗೆ ತೆಗೆದುಕೊಂಡು ಹೋಗುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಮಾತುಕತೆ ಏನೇ ಇರಲಿ, ಇವನು ಸದಾ ಕೇಳುತ್ತಾನೆ: ಅಮಿತಾಬ್ ಬಚ್ಚನ್
ಕಳೆದ ತಿಂಗಳು ಅಮಿತಾಭ್ ಬಚ್ಚನ್ ನನ್ನ ಕೋಸ್ಟರ್ ಎಂದು ಗೋಲ್ಡನ್ ರಿಟ್ರೀವರ್ ನಾಯಿಯ ಫೋಟೊ ಒಂದನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.
ಸರ್ಕಾರಿ ಆಸ್ಪತ್ರೆಗೆ ₹1.75 ಕೋಟಿ ಬೆಲೆಯ ವೈದ್ಯಕೀಯ ಉಪಕರಣ ನೀಡಿದ ಅಮಿತಾಭ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.