ಮಂಗಳವಾರ, ಅಕ್ಟೋಬರ್ 26, 2021
27 °C

ಪಾನ್‌ ಮಸಾಲಾ ಬ್ರ್ಯಾಂಡ್‌ ಜಾಹೀರಾತಿನಿಂದ ಹಿಂದೆ ಸರಿದ ನಟ ಅಮಿತಾಭ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಪಾನ್‌ ಮಸಾಲಾ ಬ್ರ್ಯಾಂಡ್‌ ಜಾಹೀರಾತು ಪ್ರಚಾರದಿಂದ ಪ್ರಸಿದ್ಧ ನಟ ಅಮಿತಾಭ್‌ ಬಚ್ಚನ್‌ ಅವರು ಹಿಂದೆ ಸರಿದಿದ್ದಾರೆ.

ಪ್ರಚಾರಕ್ಕಾಗಿ ತಾವು ಪಡೆದಿದ್ದ ಹಣವನ್ನು ಹಿಂತಿರುಗಿಸಿರುವುದಾಗಿಯೂ ಅವರು ಹೇಳಿದ್ದಾರೆ. 

ಪಾನ್ ಮಸಾಲಾ ಬ್ರ್ಯಾಂಡ್‌ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ನಟ ಅಮಿತಾಭ್‌ (79) ಅವರು ಟೀಕೆಗಳನ್ನು ಎದುರಿಸಿದ್ದರು. ನಟನ ಈ ನಿರ್ಧಾರದ ಬಗ್ಗೆ ಅವರ ಹಲವು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. 

‘ಅಮಿತಾಭ್‌ ಅವರು ಇನ್ನು ಮುಂದೆ ‍ಪಾನ್‌ಮಸಾಲಾ ಪ್ರಚಾರದಲ್ಲಿ ಭಾಗಿಯಾಗುವುದಿಲ್ಲ’ ಎಂದು ಅವರ ಕಚೇರಿಯ ಬ್ಲಾಗ್‌ ಪೋಸ್ಟ್‌ವೊಂದು ಭಾನುವಾರ ರಾತ್ರಿ ತಿಳಿಸಿದೆ.  

‘ಉತ್ಪನ್ನದ ಜಾಹೀರಾತು ಪ್ರಸಾರವಾದ ಕೆಲವು ದಿನಗಳ ನಂತರ ಕಳೆದ ವಾರ ಅಮಿತಾಭ್‌ ಅವರು  ಬ್ರ್ಯಾಂಡ್‌ ಅಧಿಕಾರಿಗಳನ್ನು ಸಂಪರ್ಕಿಸಿ ಅದರಿಂದ ಹೊರ ಬಂದಿದ್ದಾರೆ. ಅವರು ಜಾಹೀರಾತಿನ ಪ್ರತಿನಿಧಿಯಾಗಿರುವ ಬಗ್ಗೆ ಅವರಿಗೆ ಮಾಹಿತಿ ಇರಲಿಲ್ಲ. ಇದರಿಂದ ಟೀಕೆಗಳು ವ್ಯಕ್ತವಾದ ಮೇಲೆ  ಅವರು ಈ ಹಠಾತ್‌ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.   

ಪಾನ್‌ ಮಸಾಲಾ ಬ್ರ್ಯಾಂಡ್‌ಗಳನ್ನು ಉತ್ತೇಜಿಸುವ ಜಾಹೀರಾತುಗಳಲ್ಲಿ ಅಮಿತಾಭ್‌ ಬಚ್ಚನ್‌ ಅವರು ಭಾಗಿಯಾಗಬಾರದು ಎಂದು ರಾಷ್ಟ್ರೀಯ ತಂಬಾಕು ನಿರ್ಮೂಲನೆ ಸಂಸ್ಥೆ (ಎನ್‌ಒಟಿಇ) ಅಧ್ಯಕ್ಷ ಡಾ.ಶೇಖರ್‌ ಸಲ್ಕರ್‌ ಅವರು ಕಳೆದ ತಿಂಗಳು ಪತ್ರವೊಂದರಲ್ಲಿ ಮನವಿ ಮಾಡಿದ್ದರು.  

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು