ಶನಿವಾರ, ಫೆಬ್ರವರಿ 22, 2020
19 °C

ಮೇರು ನಟರ ಮಕ್ಕಳ ಜೊತೆ ಕೆಲಸ: ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದ ಅಮಿತಾಭ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

‘ಭಾರತೀಯ ಸಿನಿಮಾ ಕ್ಷೇತ್ರದ ಮೂವರು ಮೇರು ನಟರ ಮಕ್ಕಳ ಜೊತೆ ಕೆಲಸ ಮಾಡಿದ್ದು ನನಗೂ ಮತ್ತು ಜಯಾಗೂ ಐತಿಹಾಸಿಕ ಕ್ಷಣ’ ಎಂದು ಅಮಿತಾಭ್‌ ಬಚ್ಚನ್‌ ಟ್ವೀಟ್‌ ಮಾಡಿದ್ದಾರೆ.

ಕಲ್ಯಾಣ್ ಜ್ಯುವೆಲ್ಲರ್ಸ್‌ ಜಾಹೀರಾತಿನ ಶೂಟ್‌ನಲ್ಲಿ ತೆಲುಗು ನಟ ಅಕ್ಕಿನೇನಿ ನಾಗೇಶ್ವರ್ ಅವರ ಮಗ ನಾಗಾರ್ಜುನ್‌, ಕನ್ನಡದ ರಾಜ್‌ಕುಮಾರ್‌ ಅವರ ಮಗ ಶಿವರಾಜ್‌ಕುಮಾರ್‌ ಹಾಗೂ ‌ತಮಿಳಿನ ಶಿವಾಜಿ ಗಣೇಶನ್ ಅವರ ಮಗ ಪ್ರಭು ಅವರ ಜೊತೆ ಅಮಿತಾಭ್‌ ಬಚ್ಚನ್‌ ಮತ್ತು ಜಯಾ ಬಚ್ಚನ್‌ ಇರುವ ಫೋಟೊವೊಂದನ್ನು ಟ್ವೀಟ್‌ ಮಾಡಿ, ‘ಈ ಇವರ ಜೊತೆ ಕೆಲಸ ಮಾಡುವುದು ಎಂಥ ಗೌರವ’ ಎಂಬ ಒಕ್ಕಣೆಯನ್ನು ಬಚ್ಚನ್‌ ಬರೆದುಕೊಂಡಿದ್ದಾರೆ. 

ಬಚ್ಚನ್‌ ಅವರ ಟ್ವೀಟ್‌ಗೆ ನಟ ಶಿವರಾಜ್‌ ಕುಮಾರ್ ಅವರು ಟ್ವಿಟ್ಟರ್‌ನಲ್ಲಿ ಧನ್ಯವಾದ ಸಲ್ಲಿಸಿದ್ದಾರೆ.

ಅಮಿತಾಬ್ ಬಚ್ಚನ್‌, ಜಯಾ ಬಚ್ಚನ್‌, ನಾಗಾರ್ಜುನ್‌, ಶಿವರಾಜ್‌ಕುಮಾರ್ ಮತ್ತು ಪ್ರಭು ಅವರು ಕಲ್ಯಾಣ್‌ ಜ್ಯುವೆಲ‌ರ್ಸ್‌ನ ಪ್ರಚಾರ ರಾಯಭಾರಿಗಳಾಗಿದ್ದಾರೆ.  

ಬಚ್ಚನ್‌ ಟ್ವಿಟ್‌ ಮಾಡಿದ 15 ನಿಮಿಷದಲ್ಲೇ ಅದನ್ನು 134 ಮಂದಿ ಮರು ಟ್ವೀಟ್‌ ಮಾಡಿಕೊಂಡಿದ್ದು, ಸುಮಾರು 3 ಸಾವಿರ ಮಂದಿ ಲೈಕ್‌ ಮಾಡಿದ್ದಾರೆ. ಅಲ್ಲದೇ ಅನೇಕರು ಅಮಿತಾಭ್‌ ಅವರ ಹಳೆಯ ಫೋಟೊಗಳನ್ನ ಹಂಚಿಕೊಂಡಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು