ಮಂಗಳವಾರ, ಜನವರಿ 26, 2021
16 °C

ಟ್ವಿಟರ್‌ನಲ್ಲಿ ಬಿಗ್‌ಬಿಗೆ ಈಗ 45ಮಿಲಿಯನ್‌ ಫಾಲೋವರ್‌ಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್‌ ಬಚ್ಚನ್ ಅವರ ಟ್ವಿಟರ್ ಖಾತೆಯನ್ನು ಬರೋಬ್ಬರಿ ನಾಲ್ಕೂವರೆ ಕೋಟಿಗೂ ಅಧಿಕ ಮಂದಿ ಹಿಂಬಾಲಿಸುತ್ತಿದ್ದಾರೆ. ಅವರು ಫೇಸ್‌ಬುಕ್‌ನಲ್ಲಿ 29 ಮಿಲಿಯನ್‌ ಹಾಗೂ ಇನ್‌ಸ್ಟಾಗ್ರಾಂನಲ್ಲಿ 24.5 ಮಿಲಿಯನ್‌ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

78 ವರ್ಷದ ಈ ನಟ ಟ್ವಿಟರ್‌ನಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಅಲ್ಲದೇ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸಾಮಾಜಿಕ ಜಾಲತಾಣದಲ್ಲೂ ಅವರು ಸುದ್ದಿಯಲ್ಲಿರುತ್ತಾರೆ. ಅಲ್ಲದೇ ತಂಬ್ಲರ್ ಎಂಬ ವೈಯಕ್ತಿಕ ಬ್ಲಾಗ್‌ವೊಂದನ್ನು ಹೊಂದಿದ್ದಾರೆ ಬಿಗ್‌ ಬಿ.

ತಮ್ಮ ಬಾಲ್ಯದ ದಿನದ ಫೋಟೊವೊಂದನ್ನು ಹಂಚಿಕೊಂಡ ಅಭಿಮಾನಿಗೆ ಟ್ವಿಟರ್‌ನಲ್ಲಿ ಧನ್ಯವಾದ ಹೇಳಿದ್ದಾರೆ ಅಮಿತಾಬ್. ಆ ಫೋಟೊದೊಂದಿಗೆ ‘ಪೂಜ್ಯ ಮಾ ಹಾಗೂ ಪೂಜ್ಯ ಬಾಬುಜಿ ಅವರ ಆಶೀರ್ವಾದದೊಂದಿಗೆ ಅಮಿತಾಬ್ ಇಂದಿಗೆ 45ಮಿಲಿಯನ್ ಫಾಲೋವರ್ಸ್‌ ಹೊಂದಿದ್ದಾರೆ’ ಎಂದು ಜಾಸ್ಮಿನ್‌ ಎಂಬ ಅಭಿಮಾನಿ ಬರೆದುಕೊಂಡಿದ್ದರು.

 

ಈ ಫೋಟೊದೊಂದಿಗೆ ಹಿಂದಿನ ದಿನಗಳಿಗೆ ಮರಳಿದ ಬಚ್ಚನ್ ‘ಥ್ಯಾಂಕ್ ಯು ಜಾಸ್ಮಿನ್‌, ಆದರೆ ಈ ಚಿತ್ರವು ಹಲವು ವಿಷಯಗಳನ್ನು ವ್ಯಕ್ತಪಡಿಸುತ್ತದೆ. ಅಪಘಾತದ ನಂತರ ಸಾವಿನಿಂದ ಬದುಕುಳಿದು ಮನೆಗೆ ಬಂದ ಕ್ಷಣವದು. ನನ್ನ ತಂದೆ ಅಷ್ಟು ಕುಗ್ಗಿ ಹೋಗಿರುವುದನ್ನು ಮೊದಲ ಬಾರಿ ನೋಡಿದ್ದೆ.’ ಎಂದು ಬರೆದುಕೊಂಡಿದ್ದಾರೆ.

 

1982ರಲ್ಲಿ ಮನಮೋಹನ್‌ ದೇಸಾಯಿ ಅವರ ಕೂಲಿ ಚಿತ್ರದ ಆ್ಯಕ್ಷನ್ ದೃಶ್ಯದ ಚಿತ್ರೀಕರಣದ ವೇಳೆ ಅಮಿತಾಬ್ ಅಪಘಾತಕ್ಕೆ ಒಳಗಾಗಿದ್ದರು. ಆಗ ಆಸ್ಪತ್ರೆ ಸೇರಿದ್ದ ಅವರು ಚೇತರಿಸಿಕೊಳ್ಳಲು ಕೆಲವು ತಿಂಗಳುಗಳು ತೆಗೆದುಕೊಂಡಿದ್ದರು. ಆ ಘಟನೆಯನ್ನು ಬಿಗ್‌ಬಿ ತಮಗೆ ಮರುಜೀವ ಸಿಕ್ಕ ಘಟನೆ ಅದು ಎಂದೇ ವಿವರಿಸುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು