ಶುಕ್ರವಾರ, ಮೇ 29, 2020
27 °C

ಅಮೆಜಾನ್ ಪ್ರೈಮ್‌ನಲ್ಲಿ ‘ಅಮ್ಮಚ್ಚಿಯೆಂಬ ನೆನಪು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂಪಾ ಪಿ. ಶೆಟ್ಟಿ ನಿರ್ದೇಶನದ ‘ಅಮ್ಮಚ್ಚಿಯೆಂಬ ನೆನಪು’ ಚಿತ್ರವು ಅಮೆಜಾನ್‌ ಪ್ರೈಮ್‌ನಲ್ಲಿ ಪ್ರಸಾರವಾಗಿದೆ. 2018ರಲ್ಲಿ ಬಿಡುಗಡೆ ಆಗಿದ್ದ ಸಿನಿಮಾ ಇದು.

ಸಾಹಿತಿ ವೈದೇಹಿ ಅವರ ‘ಅಕ್ಕು’, ‘ಅಮ್ಮಚ್ಚಿಯೆಂಬ ನೆನಪು’, ‘ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು’ ಕಥೆಗಳನ್ನು ಸೇರಿಸಿ ಈ ಸಿನಿಮಾ ಕಥೆಯನ್ನು ಸಿದ್ಧಪಡಿಸಲಾಗಿತ್ತು. ಈ ಚಿತ್ರದಲ್ಲಿ ಅಭಿನಯಿಸಿದವರಲ್ಲಿ ಹೆಚ್ಚಿನವರು ರಂಗಭೂಮಿಯ ಹಿನ್ನೆಲೆಯವರು.

ಕರಾವಳಿ ಭಾಗದಲ್ಲಿ ಇದರ ಚಿತ್ರೀಕರಣ ನಡೆದಿತ್ತು. ನಟ ರಾಜ್‌ ಬಿ. ಶೆಟ್ಟಿ ಅವರು ಮೊದಲ ಬಾರಿಗೆ ನೆಗೆಟಿವ್ ಛಾಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವೈಜಯಂತಿ ಅಡಿಗ ಅವರು ಅಮ್ಮಚ್ಚಿಯ ಪಾತ್ರ ನಿಭಾಯಿಸಿದ್ದರು.


ವೈಜಯಂತಿ ಅಡಿಗ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.