ಬುಧವಾರ, ಮಾರ್ಚ್ 29, 2023
28 °C

‘ಅಮೃತ ಅಪಾರ್ಟ್‌ಮೆಂಟ್‌’ನಲ್ಲಿ ಶುರುವಾಯಿತು ಒಲವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಅಮೃತ ಅಪಾರ್ಟ್‌ಮೆಂಟ್‌’ ಚಿತ್ರದ ಇನ್ನೊಂದು ಹಾಡು ಯುಟ್ಯೂಬ್‌ನಲ್ಲಿ ಬಿಡುಗಡೆ ಆಗಿದೆ. ‘ಶುರುವಾಗಬೇಕು ಮತ್ತೊಮ್ಮೆ ನಮ್ಮ ಒಲವು...’ ಸಾಲಿನ ಹಾಡು ಇದು. 

ಗಂಡ-ಹೆಂಡತಿಯ ಮಧ್ಯದ ಮುನಿಸು ಕರಗುವ ಸನ್ನಿವೇಶಕ್ಕೆ ತಕ್ಕಂತೆ, ಇಡೀ ಸಿನೆಮಾದ ಕಥೆಯ ಸಾರಾಂಶವನ್ನು ಹೇಳುವ ಹಾಡು ಇದು. ಕೆ. ಕಲ್ಯಾಣ್‌ ಅವರ ಸಾಹಿತ್ಯ, ಎಸ್.ಡಿ.ಅರವಿಂದ ಅವರ ಸಂಗೀತವಿದೆ. ವಾಣಿ ಹರಿಕೃಷ್ಣ ಮತ್ತು ಅಜಯ ವಾರಿಯರ್ ಧ್ವನಿ ನೀಡಿದ್ದಾರೆ. ತಾರಕ್‌ ಪೊನ್ನಪ್ಪ ನಾಯಕ, ಊರ್ವಶಿ ಗೋವರ್ಧನ್‌ ನಾಯಕಿ. ಚಿತ್ರದ ನಿರ್ಮಾಣ ಪೂರ್ಣಗೊಂಡಿದೆ. ನವೆಂಬರ್‌ ಕೊನೆಯಲ್ಲಿ ‘ಅಮೃತ ಅಪಾರ್ಟ್‌ಮೆಂಟ್‌’ ತೆರೆಯ ಮೇಲೆ ಬರಲಿದೆ ಎಂದಿದ್ದಾರೆ ನಿರ್ಮಾಪಕ, ನಿರ್ದೇಶಕ ಗುರುರಾಜ ಕುಲಕರ್ಣಿ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು