ಭಾನುವಾರ, ಅಕ್ಟೋಬರ್ 24, 2021
28 °C

ಮಾಲ್ಡೀವ್ಸ್ ಬೀಚ್‌ನಲ್ಲಿ ಫ್ಲೆಮಿಂಗೊ ಮೇಲೆ ಅನನ್ಯಾ ಪಾಂಡೆ!

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Ananya Pande Instagram Post Screen Grab

ಬೆಂಗಳೂರು: ಬಾಲಿವುಡ್ ನಟ-ನಟಿಯರಿಗೆ ಮಾಲ್ಡೀವ್ಸ್ ಪ್ರವಾಸ ಹೋಗುವುದೆಂದರೆ ಅಚ್ಚುಮೆಚ್ಚು.

ಈ ಬಾರಿ ನಟಿ ಅನನ್ಯಾ ಪಾಂಡೆ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದು, ಅಲ್ಲಿನ ಕಡಲ ತೀರದಲ್ಲಿ ಕಳೆದ ಸುಂದರ ಕ್ಷಣಗಳ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಬೀಚ್‌ನಲ್ಲಿ ಆಟಿಕೆ ಫ್ಲೆಮಿಂಗೊ ಮೇಲೆ ಕುಳಿತಿರುವ ಅನನ್ಯಾ ಪಾಂಡೆ ಚಿತ್ರಗಳು ವೈರಲ್ ಆಗಿವೆ. ಜತೆಗೆ ಇವು ಮತ್ತಷ್ಟು ಗ್ಲಾಮರಸ್ ಆಗಿ ಕೂಡ ಕಾಣಿಸುತ್ತಿದ್ದು, ಸ್ವತಃ ಅನನ್ಯಾ ಅವರೇ ತಮ್ಮ ಚಿತ್ರಕ್ಕೆ ‘ಗ್ಲಾಮಿಂಗೊ’ ಎಂಬ ಅಡಿಬರಹ ನೀಡಿದ್ದಾರೆ.

ಜತೆಗೆ ಮತ್ತೊಂದು ಚಿತ್ರವನ್ನು ಕೂಡ ಅನನ್ಯಾ ಮಾಲ್ಡೀವ್ಸ್‌ನಿಂದ ಪೋಸ್ಟ್ ಮಾಡಿದ್ದು, ಅದರಲ್ಲಿ ಹಿನ್ನೆಲೆಯಲ್ಲಿ ಸೀ ಪ್ಲೇನ್ ಇರುವುದರಿಂದ, 'ಇದು ನನ್ನ ಪ್ಲೇನ್ ಪೋಸ್' ಎಂದು ತಮಾಷೆಯ ಅಡಿಬರಹ ನೀಡಿದ್ದಾರೆ.

ಅನನ್ಯಾ ಪಾಂಡೆ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಎಂಟು ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು