ನಿರ್ದೇಶಕ ಅನೂಪ್ ಭಂಡಾರಿ ಮತ್ತು ನಟ ಸುದೀಪ್ ಕಾಂಬಿನೇಷನ್ನಡಿ ನಿರ್ಮಾಣವಾಗುತ್ತಿರುವ ‘ಫ್ಯಾಂಟಮ್’ ಚಿತ್ರದ ಶೂಟಿಂಗ್ ಹೈದರಾಬಾದ್ನಲ್ಲಿ ನಡೆಯುತ್ತಿದೆ. ಇದರಲ್ಲಿ ನಿರೂಪ್ ಭಂಡಾರಿ ಕೂಡ ಪ್ರಧಾನ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಅವರಿಗೆ ನಾಯಕಿಯಾಗಿ ರೂಪದರ್ಶಿ ನೀತಾ ಅಶೋಕ್ ನಟಿಸುತ್ತಿದ್ದಾರೆ. ಇಂದು ಅವರ ಫಸ್ಟ್ಲುಕ್ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ನಿನ್ನೆ ‘ಫ್ಯಾಂಟಮ್’ ಚಿತ್ರ ಪನ್ನ ಕ್ಯಾರೆಕ್ಟರ್ ಬಗ್ಗೆ ರಿವೀಲ್ ಮಾಡಲಾಗುವುದು ಎಂದು ಅನೂಪ್ ಭಂಡಾರಿ ಟ್ವೀಟ್ ಮಾಡಿದ್ದರು. ಅಸಲಿಗೆ ಅವರ ಪಾತ್ರದ ಹೆಸರು ಅಪರ್ಣ ಬಳ್ಳಾಲ್ ಅಂತೆ.

ನೀತಾ ಪಾತ್ರದ ಬಗ್ಗೆ ಅನೂಪ್ ಭಂಡಾರಿ ವಿವರಿಸಿರುವುದು ಹೀಗೆ: ‘ಅಪರ್ಣ ಬಳ್ಳಾಲ್ ಅಲಿಯಾಸ್ ಪನ್ನ ಹುಟ್ಟಿ ಬೆಳೆಯುವುದು ಮುಂಬೈನಲ್ಲಿ. ಚಿತ್ರದಲ್ಲಿ ಅವಳದ್ದು ಅಪರೂಪವಾದ ಪಾತ್ರ. ಆಕೆ ಮಾತನಾಡುವುದು ಹಿಂದಿ ಮಿಶ್ರಿತ ಕನ್ನಡ. ಆಕೆಯದು ಸಾಹಸ ಮನೋಭಾವ. ಈ ಪಾತ್ರಕ್ಕೆ ನೀತಾ ಅಶೋಕ್ ಜೀವ ತುಂಬುತ್ತಿದ್ದಾರೆ. ‘ಫ್ಯಾಂಟಮ್’ ಚಿತ್ರದ ಮೂಲಕ ಮೊದಲ ಬಾರಿಗೆ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ನೀತಾ, ಫ್ಯಾಂಟಮ್ ಜಗತ್ತಿಗೆ ನಿಮಗೆ ಸ್ವಾಗತ’ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ ಈ ಚಿತ್ರದಲ್ಲಿ ಮೂವರು ನಾಯಕಿಯರು ಇದ್ದಾರೆ. ಸುದೀಪ್ಗೆ ಶ್ರದ್ಧಾ ಶ್ರೀನಾಥ್ ಜೋಡಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿಯಿದೆ. ಆದರೆ, ಇನ್ನೂ ಈ ಕುರಿತು ಚಿತ್ರತಂಡ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಅತಿಥಿ ಪಾತ್ರದಲ್ಲಿ ಮತ್ತೊಬ್ಬ ನಾಯಕಿ ಇದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಶಾಲಿನಿ ಮಂಜುನಾಥ್ ಮತ್ತು ಜಾಕ್ ಮಂಜು ಇದಕ್ಕೆ ಬಂಡವಾಳ ಹೂಡಿದ್ದಾರೆ. ವಿಲಿಯಂ ಡೇವಿಡ್ ಅವರ ಛಾಯಾಗ್ರಹಣವಿದೆ. ಅಜನೀಶ್ ಲೋಕನಾಥ್ ಇದಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ‘ಕೆಜಿಎಫ್ ಚಾಪ್ಟರ್ 1’ ಚಿತ್ರದ ಖ್ಯಾತಿಯ ಶಿವಕುಮಾರ್ ಅವರ ಕಲಾ ನಿರ್ದೇಶನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.