ಬುಧವಾರ, ಜೂನ್ 29, 2022
23 °C

80 ಸಾವಿರ ಹಿಂಬಾಲಕರನ್ನು ಕಳೆದುಕೊಂಡ ಅನುಪಮ್‌ 'ಕೇರ್‌'!

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Anupam Kher/Twitter

ಹಿರಿಯ ಬಾಲಿವುಡ್‌ ನಟ ಅನುಪಮ್‌ ಖೇರ್‌ ಟ್ವಿಟರ್‌ನಲ್ಲಿ ಸುಮಾರು 80,000 ಹಿಂಬಾಲಕರನ್ನು ಕಳೆದುಕೊಂಡಿದ್ದಾರೆ. ಕೇವಲ 36 ಗಂಟೆಗಳಲ್ಲಿ ಇಷ್ಟೊಂದು ಸಂಖ್ಯೆಯ ಫಾಲೋವರ್‌ಗಳನ್ನು ಕಳೆದುಕೊಂಡ ಬಗ್ಗೆ ಕಳವಳಕ್ಕೆ ಒಳಗಾದ ಅನುಪಮ್ ಖೇರ್‌ ಟ್ವಿಟರ್‌ ಇಂಡಿಯಾ ಬಳಿ ಕಾರಣ ಕೇಳಿದ್ದಾರೆ.

ತಾತ್ಕಾಲಿಕವಾಗಿ ಉಂಟಾದ ದೋಷವೇ ಅಥವಾ ತಾಂತ್ರಿಕವಾಗಿ ಏನಾದರು ದೋಷವಿದೆಯೇ ಎಂದು ಟ್ವಿಟರ್‌ಗೆ ಪ್ರಶ್ನಿಸಿರುವ ಖೇರ್‌, ಇದು ನಾನು ಗಮನಿಸಿದಾಗ ಕಂಡುಬಂದ ಅಂಶವಷ್ಟೇ. ದೂರು ನೀಡಿರುವುದಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಹಲವು ಟ್ವಿಟರ್‌ ಬಳಕೆದಾರರು ಫಾಲೋವರ್ಸ್‌ ಕಳೆದುಕೊಂಡಿರುವ ಬಗ್ಗೆ ಕಮೆಂಟ್‌ ಮಾಡಿದ್ದಾರೆ. ಈ ಬಗ್ಗೆ ಟ್ವಿಟರ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸದಾ ಟ್ವಿಟರ್‌ನಲ್ಲಿ ಕ್ರಿಯಾಶೀಲರಾಗಿರುವ ಅನುಪಮ್‌ ಖೇರ್‌ ಸೆಪ್ಟೆಂಬರ್‌ 2009ರಲ್ಲಿ ಟ್ವಿಟರ್‌ ಖಾತೆ ತೆರೆದಿದ್ದರು. ಪ್ರಸ್ತುತ 1.87 ಕೋಟಿ ಫಾಲೋವರ್ಸ್‌ ಹೊಂದಿದ್ದಾರೆ.

20 ವರ್ಷಗಳ ಹಿಂದೆ ಸಂಭವಿಸಿದ ಭೀಕರ ಭೂಕಂಪನದ ಕಥಾವಸ್ತುವಿನೊಂದಿಗೆ ಮೂಡಿ ಬಂದಿರುವ 'ಭುಜ್‌: ದಿ ಡೇ ಇಂಡಿಯಾ ಶಾಕ್‌' ಸಿನಿಮಾದಲ್ಲಿ ಘಟನೆಯನ್ನು ವಿವರಿಸುವ ನಿರೂಪಕರಾಗಿ ಖೇರ್‌ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಟ್ರೈಲರ್‌ ಬಿಡುಗಡೆಗೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು