ಭಾನುವಾರ, ಸೆಪ್ಟೆಂಬರ್ 19, 2021
29 °C
ಅಪ್ಪಂದಿರ ದಿನಕ್ಕೆ ಅನುಷ್ಕಾ ಶರ್ಮಾ ಹಾರೈಸಿದ್ದು ಹೀಗೆ

ಎಲ್ಲ ಹುಡುಗಿಯರಿಗೂ ನನಗೆ ಸಿಕ್ಕಂಥ ಅಪ್ಪ ಸಿಗಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅನುಷ್ಕಾ ಮದುವೆಯ ಮೆಹಂದಿ ಕಾರ್ಯಕ್ರಮದಲ್ಲಿ ಅಪ್ಪ ಪ್ರೀತಿಯಿಂದ ಕೆನ್ನೆಗೆ ಮುತ್ತಿಕ್ಕುತ್ತಿರುವ ಫೋಟೊ

ಎಲ್ಲ ಹುಡುಗಿಯರಿಗೂ ನನಗೆ ಸಿಕ್ಕಂಥ ಅಪ್ಪ ಸಿಗಲಿ...

‘ಅಪ್ಪಂದಿರ ದಿನ’ ಹೀಗೆಂದು ಹಾರೈಸಿದ್ದು ಬಾಲಿವುಡ್‌ನ ಹಾಲು ಬಣ್ಣದ ಚೆಲುವೆ ಅನುಷ್ಕಾ ಶರ್ಮಾ. ಅಪ್ಪಂದಿರ ದಿನದ ನೆನಪಿನಲ್ಲಿ ಅನುಷ್ಕಾ ಬೆಂಗಳೂರಿನಲ್ಲಿ ತಂದೆಯೊಂದಿಗೆ ತಾನು ಕಳೆದ ದಿನಗಳನ್ನು ಮೆಲುಕು ಹಾಕಿದ್ದಾರೆ. 

ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರನ್ನು ವಿವಾಹವಾಗಿರುವ ಈ ಬಾಲಿವುಡ್‌ ಬೆಡಗಿ, ಮದುವೆಯ ಮೆಹಂದಿ ಕಾರ್ಯಕ್ರಮದಲ್ಲಿ ಅಪ್ಪ ಪ್ರೀತಿಯಿಂದ ಕೆನ್ನೆಗೆ ಮುತ್ತಿಕ್ಕುತ್ತಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.   

‘ಅಪ್ಪ ಸೇನೆಯಲ್ಲಿದ್ದಾಗ ಬಹಳಷ್ಟು ವರ್ಷಗಳ ಕಾಲ ನಮ್ಮ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿತ್ತು. ನಾನು ಕಾಲೇಜು ಓದಿದ್ದು  ಬೆಂಗಳೂರಿನಲ್ಲಿ. ನಾನಾಗ ಪಿಯುಸಿ ಓದುತ್ತಿದ್ದೆ. ಪ್ರತಿದಿನ ಅಪ್ಪ ಕಾರಿನಲ್ಲಿ ನನ್ನನ್ನು ಕಾಲೇಜಿಗೆ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದರು. ಕಾರಿನಲ್ಲಿ ಅಪ್ಪ ಹೇಳುತ್ತಿದ್ದ ಬುದ್ದಿಮಾತು ಇಂದಿಗೂ ನನ್ನನ್ನು ಜೋಪಾನವಾಗಿ ಕೈ ಹಿಡಿದು ನಡೆಸುತ್ತಿವೆ’ ಎಂದು ಗುಳಿಕೆನ್ನೆ ಚೆಲುವೆ ಹೇಳಿದ್ದಾರೆ.

ಅನುಷ್ಕಾ ತನ್ನ ಅಪ್ಪನ ಫೋಟೊ ಕೆಳಗೆ... ‘ಅಮ್ಮ ಪ್ರೀತಿಯ ಕಡಲಾದರೆ, ಅಪ್ಪ ಆಸರೆ ನೀಡುವ ಆಲದಮರ. ನಾವು ಕಂಡ ಮೊದಲ ಸೂಪರ್‌ಮ್ಯಾನ್‌. ನಮ್ಮ ಮೊದಲ ಹೀರೊ’ ಎಂಬ ಅಡಿಬರಹ ಬರೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು