ಸೋಮವಾರ, ಆಗಸ್ಟ್ 2, 2021
20 °C

ಬುಲ್‌ಬುಲ್‌ ಫಸ್ಟ್‌ಲುಕ್‌: ಅನುಷ್ಕಾ ಶರ್ಮಾ ನಿರ್ಮಾಣದ ವೆಬ್‌ಸರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಮ್ಮ ಮೊದಲ ಅಮೆಜಾನ್‌ ಪ್ರೈಮ್‌ ವಿಡಿಯೊ ವೆಬ್‌ಸರಣಿ ‘ಪಾತಾಳ‌ ಲೋಕ’ದ ಬಾರಿ ಯಶಸ್ಸಿನ ನಂತರ, ನಟಿ ಅನುಷ್ಕಾ ಶರ್ಮ, ತಾವೇ ನಿರ್ಮಾಣ ಮಾಡುತ್ತಿರುವ   ಮುಂದಿನ ವೆಬ್‌ಸರಣಿ ‘ಬುಲ್‌ಬುಲ್‌’ ಫಸ್ಟ್‌ಲುಕ್‌ನ್ನು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

‘ಪಾತಾಳ‌ ಲೋಕ’ದಂತೆ ಇದೂ ಕೂಡ ಹಾರರ್‌ ಕತೆ ಎಂಬ ಸುಳಿವನ್ನು ಅನುಷ್ಕಾ ಬಿಟ್ಟುಕೊಟ್ಟಿದ್ದಾರೆ. ಫಸ್ಟ್‌ಲುಕ್‌ನಲ್ಲಿ ಗಾಳಿಯಲ್ಲಿ ದೆವ್ವದಂತೆ ಯುವತಿಯೊಬ್ಬಳು ತೇಲುತ್ತಿರುವಂತಹ ದೃಶ್ಯವಿದೆ. ‘ಇಲ್ಲಿದೆ ಬುಲ್‌ಬುಲ್‌ ಫಸ್ಟ್‌ಲುಕ್‌. ಸ್ವಯಂ ಅನ್ವೇಷಣೆ ಹಾಗೂ ನ್ಯಾಯದ ಸುತ್ತಲಿನ ಕತೆ. ಸಿದ್ಧಾಂತ, ಒಳಸಂಚು, ರಹಸ್ಯ ಎಲ್ಲವೂ ಇದರಲ್ಲಿದೆ’ ಎಂದು ಫಸ್ಟ್‌ಲುಕ್‌ ಜೊತೆಗೆ ಅನುಷ್ಕಾ ಬರೆದಿರುವ ಅಡಿಬರಹ ಹೊಸ ವೆಬ್‌ಸರಣಿ ಬಗೆಗಿನ ಕುತೂಹಲವನ್ನು ಹೆಚ್ಚು ಮಾಡುತ್ತದೆ.

ಅನುಷ್ಕಾ ಶರ್ಮಾ, ಸಿನಿಮಾದಲ್ಲಿ ನಟಿಸುವದಷ್ಟೇ ಅಲ್ಲದೇ, ನಿರ್ಮಾಣ ಕ್ಷೇತ್ರದಲ್ಲಿಯೂ ಯಶಸ್ಸು ಕಾಣುತ್ತಿದ್ದಾರೆ. ಅದಕ್ಕೆ  ‘ಪಾತಾಳ ಲೋಕ‘ ವೆಬ್‌ಸರಣಿಯೇ ಸಾಕ್ಷಿ. 

ಅಂದ ಹಾಗೆ, ಅನುಷ್ಕಾ ಅವರಿಗೆ ಅಪರಾಧ ಹಾಗೂ ದೆವ್ವದ ಕತೆಗಳು ಇಷ್ಟ ಎಂಬುದಕ್ಕೆ ಅವರ ನಿರ್ಮಾಣದ ‘ಎನ್‌ಎಚ್‌10’, ‘ಪರಿ’,‘ಪಾತಾಳಲೋಕದಿಂದ ಗೊತ್ತಾಗುತ್ತದೆ. ಈಗ ಅವುಗಳ ಸಾಲಿಗೆ ‘ಬುಲ್‌ಬುಲ್‌’ ಕೂಡ ಸೇರುವಂತಿದೆ.

ಈ ವೆಬ್‌ಸರಣಿಯನ್ನು ಅನುಷ್ಕಾ ಶರ್ಮ ಅವರ ಕ್ಲೀನ್‌ ಸ್ಟೇಟ್‌ ಫಿಲ್ಮ್ಸ್‌ ನಿರ್ಮಾಣ ಮಾಡುತ್ತಿದೆ. ಇದರಲ್ಲಿ ಅವಿನಾಶ್‌ ತ್ರಿಪಾಠಿ, ತೃಪ್ತಿ ಡಿಮ್ರಿ, ರಾಹುಲ್‌ ಭೋಸ್‌ ಮೊದಲಾದವರು ನಟಿಸಿದ್ದಾರೆ. ಇದು ಜೂನ್‌ 24ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು