ಶನಿವಾರ, ಸೆಪ್ಟೆಂಬರ್ 18, 2021
28 °C

ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್ ತಾಯಿ ವಿಧಿವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಎ.ಆರ್‌. ರೆಹಮಾನ್ ತಾಯಿ ಕರೀಮಾ ಬೇಗಂ ಇಂದು ಚೆನ್ನೈನಲ್ಲಿ ವಿಧಿವಶರಾಗಿದ್ದಾರೆ. ತಮ್ಮ ಟ್ವಿಟರ್‌ ಖಾತೆಯಲ್ಲಿ ತಾಯಿಯ ಫೋಟೊವನ್ನು ಹಂಚಿಕೊಂಡಿರುವ ರೆಹಮಾನ್ ಈ ವಿಷಯವನ್ನು ದೃಢಪಡಿಸಿದ್ದಾರೆ.

ನಿರ್ದೇಶಕ ಮೋಹನ್‌ರಾಜ್‌, ನಿರ್ಮಾಪಕ ಡಾ. ಧನಂಜಯನ್‌, ಗಾಯಕ ಹರ್ಷ್‌ದೀಪ್‌ ಕೌರ್‌, ವಿಘ್ನೇಶ್‌ ಶಿವನ್‌, ಗಾಯಕಿ ಶ್ರೇಯಾ ಘೋಷಲ್‌ ಸೇರಿದಂತೆ ಅನೇಕ ಚಿತ್ರರಂಗದ ಗಣ್ಯರು ಕರೀಮಾ ಬೇಗಂ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

‘ನಿಮ್ಮ ತಾಯಿಗೆ ಸಾವಿಗೆ ಸಂತಾಪಗಳು ಸರ್‌, ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಮೋಹನ್‌ರಾಜ್ ಟ್ವೀಟ್ ಮಾಡಿದ್ದಾರೆ.

‘ಡಿಯರ್‌ ಸರ್‌, ದೇವರು ನಿಮಗೆ ನೋವು ಭರಿಸುವ ಶಕ್ತಿ ಕೊಡಲಿ. ಅಮ್ಮನದ್ದು ಪವಿತ್ರ ಆತ್ಮ, ನಮ್ಮ ಹೃದಯದಲ್ಲಿ ಅವರು ಸದಾ ಇರುತ್ತಾರೆ’ ಎಂದು ಬರೆದುಕೊಂಡಿದ್ದಾರೆ ಹರ್ಷ್‌ದೀಪ್‌ ಕೌರ್‌.

ರೆಹಮಾನ್ ಅವರ 9ನೇ ವಯಸ್ಸಿನಲ್ಲಿ ತಂದೆ, ಸಂಗೀತ ಸಂಯೋಜನ ಆರ್‌.ಒ. ಶೇಖರ್ ಮರಣ ಹೊಂದಿದ್ದರು. ಅವರ ತಾಯಿಯೇ ಇವರನ್ನು ಬೆಳೆಸಿದ್ದರು. ತನ್ನಲ್ಲಿರುವ ಸಂಗೀತ ಪ್ರತಿಭೆಯನ್ನು ಗುರುತಿಸಿ, ಪೋಷಿಸಿದ್ದು ತಾಯಿ ಎಂದು ರೆಹಮಾನ್ ಅನೇಕ ಸಂದರ್ಶನಗಳಲ್ಲಿ ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು