ಬುಧವಾರ, ಏಪ್ರಿಲ್ 21, 2021
32 °C

ವಿಕ್ರಮ್‌ ಚಿತ್ರಕ್ಕೆ ರೆಹಮಾನ್‌ ಸಂಗೀತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ವಿಕ್ರಮ್‌ ಅಭಿನಯದ ತಮಿಳು ಚಿತ್ರಕ್ಕೆ ಎ.ಆರ್‌. ರೆಹಮಾನ್‌ ಅವರು ಸಂಗೀತ ನೀಡಲಿದ್ದಾರೆ. ಅವರನ್ನು ಚಿತ್ರತಂಡ ಸ್ವಾಗತಿಸಿದ್ದು, ರೆಹಮಾನ್‌ ಅವರ ಫೋಟೊ ಒಳಗೊಂಡ ವಿಶೇಷ ಪೋಸ್ಟರ್‌ ಸಿದ್ಧಪಡಿಸಿದ್ದಾರೆ. ಇದನ್ನು ವಿಕ್ರಮ್‌ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಅಜಯ್‌ ಜ್ಞಾನಮುತ್ತು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ.

ಚಿತ್ರದಲ್ಲಿ ವಿಕ್ರಮ್‌ ಬಹು ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೂಲಗಳ ಪ್ರಕಾರ ಈ ಚಿತ್ರದಲ್ಲಿ ಅವರು ಛಾಯಾಗ್ರಾಹಕನಾಗಿಯೂ ನಟಿಸಲಿದ್ದಾರೆ. ಈ ಚಿತ್ರ ಆಗಸ್ಟ್‌ ತಿಂಗಳಲ್ಲಿ ಸೆಟ್ಟೇರಲಿದ್ದು, ಮುಂದಿನ ವರ್ಷ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು