ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಲ್ಪಾ ಶೆಟ್ಟಿಗೆ ಜನ್ಮದಿನದ ಸಂಭ್ರಮ: ರಾಜ್‌ ಕುಂದ್ರಾ ಶುಭಾಶಯ ಕೋರಿದ ಪರಿ ಇದು...

Last Updated 8 ಜೂನ್ 2021, 7:20 IST
ಅಕ್ಷರ ಗಾತ್ರ

ಬಾಲಿವುಡ್‌ ನಟಿ, ತುಳುನಾಡಿನ ಕುವರಿ ಶಿಲ್ಪಾ ಶೆಟ್ಟಿ ಕುಂದ್ರಾಗೆ ಇಂದು (ಜೂನ್‌ 8) 46ನೇ ಜನ್ಮದಿನದ ಸಂಭ್ರಮ. ಈ ಸಲ ಪತಿ ರಾಜ್‌ ಕುಂದ್ರಾ ವಿಶೇಷ ವಿಡಿಯೊ ಮೂಲಕ ಶಿಲ್ಪಾಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಪತಿ ರಾಜ್‌ ಕುಂದ್ರಾ, ಮಗ ವಿಹಾನ್‌, ಒಂದು ವರ್ಷದ ಮುದ್ದು ಮಗಳು ಸಮೀಶಾ ಜೊತೆ ಶಿಲ್ಪಾ ಶೆಟ್ಟಿ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ.

ರಾಜ್‌ ಕುಂದ್ರಾ ಇನ್‌ಸ್ಟಾಗ್ರಾಂನಲ್ಲಿ ವಿಶೇಷ ವಿಡಿಯೊ ಮೂಲಕ ಶುಭಾಶಯ ಕೋರಿದ್ದಾರೆ. 2013ರಲ್ಲಿ ತೆರೆಕಂಡಿದ್ದ ಆಶಿಕಿ–2 ಚಿತ್ರದ ‘ಹಮ್ ತೆರೆ ಬಿನ್’ ಹಿನ್ನಲೆ ಹಾಡಿಗೆ ಶಿಲ್ಪಾ ಶೆಟ್ಟಿಯ ವಿಡಿಯೊ ಹಾಗೂ ಚಿತ್ರಗಳ ಸಂಕಲನ ಮಾಡಿದ ವಿಶೇಷ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

‘ಈ ಹಾಡಿನ ಸಾಹಿತ್ಯ, ಸಂಗೀತ ಎಲ್ಲವನ್ನೂ ಹೇಳುತ್ತದೆ, ನೀನಿಲ್ಲದಿದ್ದರೆ ನಾನು ಏನೂ ಅಲ್ಲ’ ಎಂದು ಬರೆದು ವಿಡಿಯೊವನ್ನು ಹಂಚಿಕೊಂಡಿದ್ದಾರೆ. ‘ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ಜನ್ಮದಿನದ ಶುಭಾಶಯಗಳು, ನನ್ನ ಕನಸು ನನಸಾಗಿದೆ’ ಎಂದುವಿಡಿಯೊದ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

1993ರಲ್ಲಿ ‘ಬಾಜಿಗರ್’‌ ಚಿತ್ರದ ಮೂಲಕ ಬಾಲಿವುಡ್‌ ಪ್ರವೇಶಿಸಿದ ಶಿಲ್ಪಾ ಶೆಟ್ಟಿ, ಆ ಚಿತ್ರದಲ್ಲಿ ಶಾರುಕ್‌ ಖಾನ್‌ ಹಾಗೂ ಕಾಜೊಲ್‌ ಜೊತೆ ನಟಿಸಿದ್ದರು. ಅಲ್ಲಿಂದ ಶುರುವಾದ ಅವರ ಸಿನಿಮಾಯಾನ, ಮನೋಜ್ಞ ನಟನೆಯ ಮೂಲಕ ಬಾಲಿವುಡ್‌ನಲ್ಲಿ ತನ್ನದೇ ಛಾಪು ಮೂಡಿಸಿದರು.

ಮಗ ವಿಹಾನ್‌ ಹುಟ್ಟಿದ ಬಳಿಕ ಸಿನಿಕ್ಷೇತ್ರದಿಂದ ಅಂತರ ಕಾಯ್ದುಕೊಂಡಿದ್ದ ಅವರು, ಯೋಗ ಹಾಗೂ ಅಡುಗೆ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿದ್ದಾರೆ.

ಬಾಲಿವುಡ್‌ನ ಅನೇಕ ಗಣ್ಯರು ಶಿಲ್ಪಾ ಶೆಟ್ಟಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT