ಮಂಗಳವಾರ, ನವೆಂಬರ್ 24, 2020
21 °C

ಅರಿಷಡ್ವರ್ಗ ಟ್ರೈಲರ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅರಿಷಡ್ವರ್ಗ ಹೊಸ ಬಗೆಯ ಕುತೂಹಲಕರ ಕಥಾ ವಸ್ತುವುಳ್ಳ ಚಿತ್ರ ನ. 7ರಂದು ಬಿಡುಗಡೆಯಾಗುತ್ತಿದೆ. ಅರವಿಂದ ಕಾಮತ್‌ ಅವರ ನಿರ್ದೇಶನ, ನಿರ್ಮಾಣದ ಚಿತ್ರ ಇದು. ಚಿತ್ರದ ಟ್ರೈಲರ್‌ ಈಗಾಗಲೇ ಯೂಟ್ಯೂಬ್‌ನಲ್ಲಿ ಭಾರೀ ಮೆಚ್ಚುಗೆ ಗಳಿಸಿದೆ. 

ಬೆಂಗಳೂರಿನಲ್ಲಿ ಉದ್ಯಮಿ ಮಂಜುನಾಥ್‌ ಭಟ್‌ ಅವರ ಕೊಲೆ ಪ್ರಕರಣದ ಸುತ್ತ ಕತೆ ಹೆಣೆಯಲಾಗಿದೆ ಎಂದು ಟ್ರೈಲರ್‌ನಲ್ಲಿ ತೋರಿಸಲಾಗಿದೆ. 

ಅವಿನಾಶ್‌, ಸಂಯುಕ್ತಾ ಹೊರನಾಡು, ಮಹೇಶ್‌ ಬಂಡಾ, ಶ್ರೀಪತಿ ಮಂಜನಬೈಲು. ಅರವಿಂದ್‌ ಕುಪ್ಲೀಕರ್‌ ಅವರ ತಾರಾಗಣವಿದೆ. ಉದಿತ್‌ ಹರಿತಾಸ್‌ ಅವರ ಸಂಗೀತವಿದೆ. ಪವನ್‌ ಕುಮಾರ್‌ ಆರ್‌. ಅವರು ಸಾಹಿತ್ಯ ಬರೆದಿದ್ದಾರೆ. ಬಾಲಾಜಿ ಮನೋಹರ್‌ ಅವರ ಛಾಯಾಗ್ರಹಣವಿದೆ. 

ಟ್ರೈಲರನ್ನು ಈಗಾಗಲೇ ದಕ್ಷಿಣ ಏಷ್ಯಾದ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.