ಗುರುವಾರ , ಸೆಪ್ಟೆಂಬರ್ 16, 2021
29 °C

ಅರುಣ್ ವಿಜಯ್ ಅಭಿನಯದ ‘ಬಾರ್ಡರ್‘ ಟ್ರೈಲರ್ ಬಿಡುಗಡೆ:ಗೂಢಚರ್ಯೆ ಪಾತ್ರದಲ್ಲಿ ಮಿಂಚು

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಮಿಳಿನ ಪ್ರತಿಭಾವಂತ ನಟ ಅರುಣ್ ವಿಜಯ್ ಅವರ ‘ಬಾರ್ಡರ್‘ ಸಿನಿಮಾದ ಟ್ರೈಲರ್ ಇಂದು ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್ ಆಗಿದೆ.

ಭಯೋತ್ಪಾದನೆ ಹಾಗೂ ಗೂಢಚರ್ಯೆದ ಕಥೆಯನ್ನು ಹೊಂದಿರುವ ಈ ಚಿತ್ರವನ್ನು ಕುಟ್ರಂ23 ಖ್ಯಾತಿಯ ಅರಿವಾಜಗನ್ ಅವರು ನಿರ್ದೇಶಿಸಿದ್ದಾರೆ. ಪೂರ್ಣ ಆಕ್ಸನ್ ಹಾಗೂ ಥ್ರೀಲ್ಲರ್ ಕಥೆ ಹೊಂದಿರುವ ಬಾರ್ಡರ್ ಸಿನಿಮಾದ ಟ್ರೈಲರ್ ವಿಭಿನ್ನವಾಗಿ ಮೂಡಿಬಂದಿದ್ದು, ಅರುಣ್ ವಿಜಯ್ ಅವರಿಗೆ ನಾಯಕಿಯಾಗಿ ರೆಗಿನಾ ಕ್ಯಾಸಂದ್ರಾ ಮಿಂಚಿದ್ದಾರೆ.

 

ಅರಿವಾಜಗನ್ ಹಾಗೂ ಅರುಣ್ ವಿಜಯ್ ಅವರ ಎರಡನೇ ಸಿನಿಮಾ ಇದಾಗಿದ್ದು, ಹೊಸ ನಿರೀಕ್ಷೆಯನ್ನು ಸಿನಿಪ್ರಿಯರಲ್ಲಿ ಹುಟ್ಟಿಸಿದೆ

ಅರುಣ್ ವಿಜಯ್ ಅವರು ಸಿನಾಮ್ , ಓ ಮೈ ಡಾಗ್, ಬಾಕ್ಸರ್ ಹಾಗೂ ಯಾನ್ನೈ ಸಿನಿಮಾಗಳಲ್ಲಿ ಸದ್ಯ ತೊಡಗಿಸಿಕೊಂಡಿದ್ದಾರೆ. ಅರುಣ್ ವಿಜಯ್ ಅವರು ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯದ ಚಕ್ರವ್ಯೂಹದಲ್ಲಿ ಖಳ ಪಾತ್ರದಲ್ಲಿ ಮಿಂಚಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು