ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಪ್ಟೆಂಬರ್‌ನಲ್ಲಿ ಮತ್ತೆ ಬರ್ತಾಳೆ ‘ಸಿರಿ’

Published 15 ಆಗಸ್ಟ್ 2023, 0:02 IST
Last Updated 15 ಆಗಸ್ಟ್ 2023, 0:02 IST
ಅಕ್ಷರ ಗಾತ್ರ

‘ಅಮಿಗೋಸ್‌’ ಸಿನಿಮಾ ಮೂಲಕ ನಟ ನಂದಮೂರಿ ಕಲ್ಯಾಣ್‌ ರಾಮ್‌ ಜೊತೆ ಟಾಲಿವುಡ್‌ನಲ್ಲಿ ಮಿಂಚಿದ್ದ ಸ್ಯಾಂಡಲ್‌ವುಡ್‌ನ ‘ಪಟಾಕಿ ಪೋರಿ’ ಆಶಿಕಾ ರಂಗನಾಥ್‌, ಹೊಸ ತೆಲುಗು ಪ್ರಾಜೆಕ್ಟ್‌ಗಳತ್ತ ಚಿತ್ತ ಹರಿಸಿದ್ದಾರೆ. 

‘ಮುಂದಿನ ತೆಲುಗು ಸಿನಿಮಾ ಯಾವಾಗ?’ ಎನ್ನುವ ಅಭಿಮಾನಿಗಳ ಪ್ರಶ್ನೆಗೆ ‘ಕೆಲವು ಸ್ಕ್ರಿಪ್ಟ್‌ಗಳನ್ನು ಕೇಳುತ್ತಿದ್ದೇನೆ. ಆದಷ್ಟು ಬೇಗ ಪ್ರಾಜೆಕ್ಟ್‌ಗಳಿಗೆ ಸಹಿ ಮಾಡುತ್ತೇನೆ’ ಎಂದಿದ್ದಾರೆ ಆಶಿಕಾ. ಸಿಂಪಲ್‌ ಸುನಿ ನಿರ್ದೇಶನದ ‘ಅವತಾರ ಪುರುಷ’ ಸಿನಿಮಾದ ಎರಡನೇ ಭಾಗ ಇದೇ ಸೆಪ್ಟೆಂಬರ್‌ನಲ್ಲಿ ರಿಲೀಸ್‌ ಆಗುವ ಸುಳಿವು ನೀಡಿದ್ದಾರೆ ಆಶಿಕಾ. ಈ ಸಿನಿಮಾದಲ್ಲಿ ‘ಸಿರಿ’ ಎಂಬ ಪಾತ್ರದಲ್ಲಿ ಆಶಿಕಾ, ನಟ ಶರಣ್‌ಗೆ ಜೋಡಿಯಾಗಿದ್ದರು. ಇತ್ತೀಚೆಗೆ ತಮ್ಮ ಜನ್ಮದಿನದ ಸಂದರ್ಭದಲ್ಲಿ ಆಶಿಕಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದು, ‘ಸುನಿ ನಿರ್ದೇಶನದ ‘ಗತವೈಭವ’ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಯನ್ನು ನಾನು ಹೊಂದಿದ್ದೇನೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ, ‘ಅವತಾರ ಪುರುಷ–2’ ಸೆಪ್ಟೆಂಬರ್‌ನಲ್ಲಿ ರಿಲೀಸ್‌ ಆಗಲಿದೆ. ಪಿಆರ್‌ಕೆ ಪ್ರೊಡಕ್ಷನ್ಸ್‌ನ ‘O2’ ಸಿನಿಮಾದ ಫಸ್ಟ್‌ ಲುಕ್‌ ಕೂಡಾ ಶೀಘ್ರದಲ್ಲೇ ರಿಲೀಸ್‌ ಆಗಲಿದೆ’ ಎಂದಿದ್ದಾರೆ.   

ತಮಿಳಿನಲ್ಲಿ ‘ಪಟ್ಟತ್ತು ಅರಸನ್‌’ ಸಿನಿಮಾ ಬಳಿಕ, ನಟ ಸಿದ್ಧಾರ್ಥ್‌ ಅವರ ಜೊತೆಗೂ ಹೊಸ ಸಿನಿಮಾವೊಂದರಲ್ಲಿ ಆಶಿಕಾ ನಟಿಸಿದ್ದು, ಇದರ ಶೀರ್ಷಿಕೆ ಇನ್ನಷ್ಟೇ ಅನಾವರಣಗೊಳ್ಳಬೇಕಿದೆ. ಈ ಸಿನಿಮಾ ಇದೇ ವರ್ಷಾಂತ್ಯಕ್ಕೆ ತೆರೆಗೆ ಬರುವ ಸಾಧ್ಯತೆ ಇದೆ ಎಂದಿದ್ದಾರೆ ಆಶಿಕಾ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT