ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಮಿಳಿನಲ್ಲಿ ಆಶಿಕಾ ಮಿಂಚು

Published : 7 ಆಗಸ್ಟ್ 2024, 12:51 IST
Last Updated : 7 ಆಗಸ್ಟ್ 2024, 12:51 IST
ಫಾಲೋ ಮಾಡಿ
Comments

ಸ್ಯಾಂಡಲ್‌ವುಡ್‌ನ ‘ಪಟಾಕಿ ಪೋರಿ’ ಆಶಿಕಾ ರಂಗನಾಥ್‌ ಕನ್ನಡ ಸಿನಿಮಾಗಳ ಜೊತೆಗೆ ತೆಲುಗು, ತಮಿಳು ಸಿನಿಮಾಗಳಲ್ಲೂ ತೊಡಗಿಸಿಕೊಂಡಿದ್ದಾರೆ. ತಮಿಳಿನಲ್ಲಿ ನಟ ಸಿದ್ಧಾರ್ಥ್‌ ಜೊತೆ ತೆರೆಹಂಚಿಕೊಂಡ ಬಳಿಕ ಇದೀಗ ಕಾರ್ತಿ ಜೊತೆ ನಟಿಸಲು ಆಶಿಕಾ ಸಜ್ಜಾಗಿದ್ದಾರೆ.

ಆಶಿಕಾ ಜನ್ಮದಿನದಂದು ‘ಸರ್ದಾರ್‌–2’ ಚಿತ್ರತಂಡ ಆಶಿಕಾ ಅವರನ್ನು ನಾಯಕಿಯಾಗಿ ಘೋಷಿಸಿದೆ. ಇದು ಆಶಿಕಾ ಅವರ ಮೂರನೇ ತಮಿಳು ಸಿನಿಮಾ. ಚಿತ್ರವನ್ನು ಪ್ರಿನ್ಸ್‌ ಪಿಕ್ಚರ್ಸ್‌ ನಿರ್ಮಾಣ ಮಾಡುತ್ತಿದ್ದು ಪಿಎಸ್‌ ಮಿತ್ರನ್‌ ನಿರ್ದೇಶಿಸುತ್ತಿದ್ದಾರೆ. ಮಾಳವಿಕ ಮೋಹನ್‌, ಎಸ್‌.ಜೆ.ಸೂರ್ಯ ಚಿತ್ರದ ತಾರಾಬಳಗದಲ್ಲಿದ್ದಾರೆ. ಸಿದ್ಧಾರ್ಥ್‌ ಜೊತೆ ನಟಿಸಿರುವ ‘ಮಿಸ್‌ ಯು’ ಸಿನಿಮಾ ರಿಲೀಸ್‌ಗೆ ಸಜ್ಜಾಗುತ್ತಿರುವಾಗಲೇ ಆಶಿಕಾ ಮತ್ತೊಂದು ತಮಿಳು ಪ್ರಾಜೆಕ್ಟ್‌ ಒಪ್ಪಿಕೊಂಡಿದ್ದಾರೆ. 

ತಮಿಳಿನ ಜೊತೆಗೆ ‘ಅಮಿಗೋಸ್‌’ ಸಿನಿಮಾ ಮೂಲಕ ಟಾಲಿವುಡ್‌ಗೆ ಹೆಜ್ಜೆ ಇಟ್ಟಿದ್ದ ಆಶಿಕಾ, ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಂಭರ’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಸಿಂಪಲ್‌ ಸುನಿ ನಿರ್ದೇಶನದ ‘ಗತವೈಭವ’ ಸಿನಿಮಾ ಬಿಡುಗಡೆಗೂ ಆಶಿಕಾ ಎದುರು ನೋಡುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT