ಬೆಂಗಳೂರು: ಚಂದನವನದ ಸ್ಟಾರ್ ನಟಿ ಆಶಿಕಾ ರಂಗನಾಥ್ ಅವರು ತಮ್ಮ ಸಿನಿಮಾಗಳ ಚಿತ್ರೀಕರಣದ ನಡುವೆಯೂ ಪ್ರವಾಸ, ಮೋಜು–ಮಸ್ತಿ ಮಾಡುವುದರಲ್ಲಿ ಹಿಂದೆ ಬೀಳಲ್ಲ. ಅಲ್ಲದೇ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಅಭಿಮಾನಿಗಳಿಗೆ ಫೋಟೊ ವಿಡಿಯೊ ಮೂಲಕ ರಂಜಿಸುತ್ತಿರುತ್ತಾರೆ.

ಇತ್ತೀಚೆಗೆ ಆಶಿಕಾ ಅವರು ಮಾಲ್ಡೀವ್ಸ್ ಪ್ರವಾಸ ಹೋಗಿದ್ದರು. ಈ ವೇಳೆ ಅವರು ಜುಮುಕಿ ಪೊಣ್ಣು ಎಂಬ ತಮಿಳು ಹಾಡೊಂದಕ್ಕೆ ರೀಲ್ಸ್ ಮಾಡಿದ್ದು ಅದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಆದರೆ, ಇದನ್ನು ಅಭಿಮಾನಿಗಳು ನಕಾರಾತ್ಮಕವಾಗಿ ಸ್ವೀಕರಿಸಿದ್ದಾರೆ. ಏಕೆಂದರೆ ಆ ನೃತ್ಯದಲ್ಲಿ ಆಶಿಕಾ ಅವರು ತುಂಡುಡುಗೆ ಧರಿಸಿದ್ದು ಅತಿ ಆಯಿತು ಎಂದು ಬಹುತೇಕ ಅಭಿಮಾನಿಗಳು ಗರಂ ಆಗಿದ್ದಾರೆ. ತಮಿಳು ಹಾಡಿಗೆ ನೃತ್ಯ ಮಾಡಿದ್ದಕ್ಕೆ ‘ಕನ್ನಡ ಮರೆತರಾ ಆಶಿಕಾ’ ಎಂದು ಕೆಲವು ಕನ್ನಡ ಅಭಿಮಾನಿಗಳು ಸಿಟ್ಟು ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಆಶಿಕಾ ಅವರ ಮಾಧಕ ಡ್ಯಾನ್ಸ್ ಕಂಡು ಬೆರಗಾಗಿದ್ದಾರೆ.

ಗುಲಾಬಿ ಬಣ್ಣದ ಉಡುಗೆಯಲ್ಲಿ ಆಶಿಕಾ ವಿವಿಧ ಭಂಗಿಗಳಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ‘ಬಹಳ ದಿನಗಳ ನಂತರ ಈ ಡ್ಯಾನ್ಸಿಂಗ್ ರೀಲ್ಸ್ ನಿಮಗಾಗಿ’ ಎಂದು ಬರೆದುಕೊಂಡಿದ್ದಾರೆ.

ಆಶಿಕಾ ಅಭಿನಯದ ಅಮಿಗೋಸ್ ತೆಲುಗು ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ.

ಸಲಿಂಗಕಾಮ ಕುರಿತ ಯುವಕನ ಪ್ರಶ್ನೆಗೆ ನಟಿ ಅನುಸೂಯಾ ಕೊಟ್ಟ ಉತ್ತರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.