ಭಾನುವಾರ, ಏಪ್ರಿಲ್ 2, 2023
31 °C

ಹೆಣ್ಣಲ್ಲ, ಗಂಡು ಆರೋಪದ ಅಥ್ಲೀಟ್‌ ಪಿಂಕಿ ಪ್ರಮಾಣಿಕ್‌ ಬಯೋಪಿಕ್‌ ಬೆಳ್ಳಿತೆರೆಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ವಿವಾದಿತ ಅಥ್ಲೀಟ್‌ ಪಿಂಕಿ ಪ್ರಮಾಣಿಕ್‌ ಅವರ ಬಯೋಪಿಕ್‌ ಘೋಷಣೆಯಾಗಿದ್ದು ಈ ಸಿನಿಮಾವನ್ನು ನಿರ್ಮಾಪಕ ಅಶೋಕ್‌ ಪಂಡಿತ್‌ ನಿರ್ಮಾಣ ಮಾಡಲಿದ್ದಾರೆ.

ಹಲವು ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿರುವ ಅವರು ಹಲವು ಪದಕಗಳನ್ನು ಗೆದ್ದುಕೊಂಡಿದ್ದಾರೆ. ಪಿಂಕಿ ಅತ್ಯಾಚಾರ ಆರೋಪದ ಮೇಲೆ ಜೈಲು ಸೇರಿದ್ದರು.

ಪಿಂಕಿ ಅವರ ಜೀವನ ಕುರಿತು ಸಿನಿಮಾ ಮಾಡಲು ಅಶೋಕ್‌ ಪಂಡಿತ್‌ ಹಕ್ಕು ಖರೀದಿ ಮಾಡಿದ್ದಾರೆ. ಈ ಚಿತ್ರವನ್ನು ಪ್ರಿಯಾಂಕ ಘಟಕ್‌ ನಿರ್ದೇಶನ ಮಾಡುವುದು ಖಚಿವಾಗಿದೆ. ಈಗಾಗಲೇ ಪ್ರಿಯಾಂಕ ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. 

ಪಿಂಕಿ ಪ್ರಮಾಣಿಕ್ ಹೆಣ್ಣಲ್ಲ, ಗಂಡು ಎಂದು ಆರೋಪಿಸಿ ಯುವತಿಯೊಬ್ಬಳು ದೂರು ನೀಡಿದ್ದರು. ಈ ಸಂಬಂಧ ಪಿಂಕಿ ಬಂಧನವಾಗಿ ಜೈಲು ವಾಸ ಸಹ ಅನುಭವಿಸಿದ್ದರು. ಅವರಿಗೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿತ್ತು. ನಂತರ ಆ ಪ್ರಕರಣದಿಂದ ಹೊರ ಬಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು