ಬೆಂಗಳೂರು: ಪಾರ್ಥೀವ ಶರೀರದ ಎದುರು ಕುಳಿತಿದ್ದ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ, ಮೌನಕ್ಕೆ ಜಾರಿದ್ದರು.

ಅಂತಿಮ ದರ್ಶನಕ್ಕೆ ಬಂದಿದ್ದ ಆಪ್ತರು ತಮ್ಮನ್ನು ಸಂತೈಸಲು ಬಂದಾಗ ಬಿಕ್ಕಿ ಬಿಕ್ಕಿ ಅಳುತ್ತಿದ್ದರು.

ಅಭಿಮಾನಿಗಳು ಅಪ್ಪು, ಅಪ್ಪು...ಎಂದು ರೋಧಿಸಿದಾಗ ಅಶ್ವಿನಿ ಅವರ ಕಣ್ಣುಗಳೂ ಹನಿಗೂಡುತ್ತಿದ್ದವು.

ಅವರ ಪಕ್ಕದಲ್ಲೇ ಕುಳಿತಿದ್ದ ರಾಘವೇಂದ್ರ ರಾಜ್‌ಕುಮಾರ್ ಪತ್ನಿ ಮಂಗಳಾ ಅವರು ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ತಡೆದುಕೊಂಡು ಅಶ್ವಿನಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದರು.

ರಾಘವೇಂದ್ರ ರಾಜ್‌ಕುಮಾರ್ ಅವರು ಭಾರವಾದ ಮನಸ್ಸಿನಿಂದಲೇ ತಮ್ಮನ ಪಾರ್ಥೀವ ಶರೀರವನ್ನು ತದೇಕ ಚಿತ್ತದಿಂದ ನೋಡುತ್ತಿದ್ದರು. ಕಣ್ಣಂಚಿನಿಂದ ಜಾರುತ್ತಿದ್ದ ಹನಿಗಳನ್ನು ಆಗಾಗ ಒರೆಸಿಕೊಳ್ಳುತ್ತಿದ್ದರು.

ಪಾರ್ಥೀವ ಶರೀರದ ಎದುರು ನಿಂತಿದ್ದ ಶಿವರಾಜ್‌ಕುಮಾರ್, ತಮ್ಮನ ಮೇಲೆ ಅಭಿಮಾನಗಳು ಇಟ್ಟಿರುವ ಪ್ರೀತಿ ಕಂಡು ಭಾವುಕರಾಗುತ್ತಿದ್ದರು. ಅಭಿಮಾನಿಗಳು, ಅಪ್ಪು.. ಅಪ್ಪು ಬಾಸ್.. ಪವರ್ ಸ್ಟಾರ್ ಎಂದು ಕೂಗಿದಾಗಲೆಲ್ಲಾ ಅವರ ಕಣ್ಣುಗಳು ಆರ್ದ್ರಗೊಳ್ಳುತ್ತಿದ್ದವು.

ಸದಾ ಕಾಲ ತಮ್ಮನ್ನು ಹುರಿದುಂಬಿಸುತ್ತಿದ್ದ, ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದ 'ಅಪ್ಪು ಸರ್' ಚಿರನಿದ್ರೆಗೆ ಜಾರಿರುವುದನ್ನು ಕಂಡು ಯುವ ನಟ ಹಾಗೂ ನಟಿಯರು ಕಣ್ಣೀರಿಡುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.