ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಕ್ವೇಲಿನ್‌, ನೋರಾ ಫತೇಹಿ ಸೇರಿ 12 ನಟಿಯರೊಂದಿಗೆ ಆರೋಪಿ ಸುಖೇಶ್‌ ಸಂಪರ್ಕ: ಇ.ಡಿ

Last Updated 18 ಡಿಸೆಂಬರ್ 2021, 7:50 IST
ಅಕ್ಷರ ಗಾತ್ರ

ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದ ಪ್ರಮುಖ ಆರೋಪಿ ಸುಖೇಶ್‌ ಚಂದ್ರಶೇಖರ್ ಬಾಲಿವುಡ್‌ನ 12 ನಟಿಯರ ಜೊತೆ ಸಂಪರ್ಕದಲ್ಲಿದ್ದಎಂಬ ಮಾಹಿತಿಯನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಹೇಳಿದ್ದಾರೆ.

ಸುಖೇಶ್‌ ಚಂದ್ರಶೇಖರ್‌ ತಿಹಾರ್‌ ಜೈಲಿನಲ್ಲಿ ಇರುವಾಗ 12 ಬಾಲಿವುಡ್‌ ನಟಿಯರನ್ನು ಜೈಲಿಗೆ ಕರೆಸಿಕೊಂಡಿದ್ದ. ನಟಿಯರ ಪ್ರವೇಶಕ್ಕಾಗಿ ಜೈಲು ಸಿಬ್ಬಂದಿಗೆ ಪ್ರತಿ ತಿಂಗಳು ₹1 ಕೋಟಿ ನೀಡುತ್ತಿದ್ದ ಎಂಬ ಮಾಹಿತಿಯನ್ನು ಇ.ಡಿ ಅಧಿಕಾರಿಗಳ ಬಲ್ಲ ಮೂಲಗಳು ತಿಳಿಸಿವೆ.

ಜಾಕ್ವೇಲಿನ್‌ಫರ್ನಾಂಡಿಸ್‌, ನೋರಾ ಫತೇಹಿ ಅವರನ್ನು ಜೈಲಿಗೆ ಕರೆಸಿಕೊಂಡಿರುವ ಮಾಹಿತಿ ತನಿಖೆಯಿಂದ ತಿಳಿದು ಬಂದಿದೆ. ಅವರ ಜೊತೆ ಸುಖೇಶ್‌ನಿರಂತರ ಸಂಪರ್ಕದಲ್ಲಿ ಇದ್ದಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ನಟಿಯರುಕೂಡ ಅಕ್ರಮ ಹಣ ವರ್ಗಾವಣೆ ಮಾಡುವಲ್ಲಿ ಸುಖೇಶ್‌ಗೆಸಹಾಯ ಮಾಡಿದ್ದಾರೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಬಾಲಿವುಡ್‌ ನಟಿಯರು ಹಾಗೂ ಉನ್ನತಮಟ್ಟದಅಧಿಕಾರಿಗಳಿಗೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಉಡುಗೊರೆಗಳನ್ನು ನೀಡುತ್ತಿದ್ದ ಎಂಬ ಮಾಹಿತಿಯನ್ನು ಅಧಿಕಾರಿಗಳು ತಿಳಿಸಿದ್ದಾರೆ. ಇತರೆ ನಟಿಯರ ಮಾಹಿತಿಯನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.

ಜೈಲಿನಲ್ಲಿಇದ್ದುಕೊಂಡು ಗೆಳತಿ ಹಾಗೂ ಸಹಚರರ ಜೊತೆಗೂಡಿ ಅಧಿಕಾರಿಗಳು, ಉದ್ಯಮಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ಸುಖೇಶ್‌, ಔಷಧಕ ತಯಾರಿಕ ಕಂಪನಿಯೊಂದರ ಪಾಲುದಾರನ ಪತ್ನಿಯಿಂದ ₹200 ಕೋಟಿ ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT