ಸೋಮವಾರ, ಆಗಸ್ಟ್ 15, 2022
25 °C

ಅತಿಯಾ ಶೆಟ್ಟಿ ಜತೆ ಕಾಣಿಸಿಕೊಂಡ ಕ್ರಿಕೆಟಿಗ ಕೆ ಎಲ್ ರಾಹುಲ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Athiya Shetty Instagram

ಬೆಂಗಳೂರು: ಬಾಲಿವುಡ್‌ನ ಖ್ಯಾತ ನಟ ಸುನಿಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿ, ಕ್ರಿಕೆಟಿಗ ಕೆ. ಎಲ್. ರಾಹುಲ್ ಡೇಟಿಂಗ್ ಮಾಡುತ್ತಿರುವ ಬಗ್ಗೆ ಹಲವು ವರದಿಗಳು ಬರುತ್ತಿರುತ್ತವೆ.

ಈ ಬಾರಿ ಅತಿಯಾ ಶೆಟ್ಟಿ ಜತೆ ಕೆ. ಎಲ್. ರಾಹುಲ್ ಕಾಣಿಸಿಕೊಂಡಿದ್ದು, ಇಬ್ಬರ ಫೋಟೊ ಕಂಡು ಅಭಿಮಾನಿಗಳು ವಾಹ್ ಎಂದಿದ್ದಾರೆ.

ಅತಿಯಾ-ರಾಹುಲ್ ಜೋಡಿ, ಕನ್ನಡಕ ಬ್ರ್ಯಾಂಡ್ ಒಂದರ ಜಾಹೀರಾತಿನಲ್ಲಿ ರೂಪದರ್ಶಿಗಳಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೊವನ್ನು ಅತಿಯಾ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಕಳೆದ ಏಪ್ರಿಲ್‌ನಲ್ಲಿ ಕೆ. ಎಲ್. ರಾಹುಲ್ ಹುಟ್ಟುಹಬ್ಬ ಆಚರಿಸಿಕೊಂಡ ಸಮಯದಲ್ಲಿ ಕೂಡ ಅತಿಯಾ, ಇಬ್ಬರೂ ಜತೆಗಿರುವ ಸೆಲ್ಫಿ ಒಂದನ್ನು ಪೋಸ್ಟ್ ಮಾಡಿದ್ದರು. ಅದೇ ಪೋಸ್ಟ್‌ಗೆ ಅತಿಯಾ ತಂದೆ, ನಟ ಸುನಿಲ್ ಶೆಟ್ಟಿ ಕೂಡ ಕಮೆಂಟ್ ಮಾಡಿದ್ದರು.

ಅತಿಯಾ 2015ರಲ್ಲಿ ತೆರೆಕಂಡ ಹೀರೋ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು