ಶುಕ್ರವಾರ, ಸೆಪ್ಟೆಂಬರ್ 24, 2021
27 °C

60ನೇ ವರ್ಷಕ್ಕೆ ಕಾಲಿಟ್ಟ ಸುನಿಲ್ ಶೆಟ್ಟಿ; ಪುತ್ರಿ ಆಥಿಯಾ ಹೃದಯಸ್ಪರ್ಶಿ ಸಂದೇಶ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್ ನಟ ಸುನಿಲ್ ಶೆಟ್ಟಿ ಬುಧವಾರದಂದು 60ನೇ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಪುತ್ರಿ ಹಾಗೂ ನಟಿ ಆಥಿಯಾ ಶೆಟ್ಟಿ ಹೃದಯಸ್ಪರ್ಶಿ ಸಂದೇಶವನ್ನು ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.

ಸುನಿಲ್ ಶೆಟ್ಟಿ ಅವರೊಂದಿಗಿನ ಬಾಲ್ಯದ ಹಾಗೂ ಈಗಿನ ಚಿತ್ರವನ್ನು ಹಂಚಿರುವ ಆಥಿಯಾ, 'ಅಪ್ಪ, ನಿಮ್ಮ ಮೇಲಿರುವ ಪ್ರೀತಿಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಾಗದು' ಎಂದಿದ್ದಾರೆ.

ಇದನ್ನೂ ಓದಿ: 

'60ನೇ ಹುಟ್ಟುಹಬ್ಬದ ಶುಭಾಶಯಗಳು ಅಪ್ಪ, ನನ್ನೆಲ್ಲ ಯೋಚನೆಗಳನ್ನೂ ಹಂಚಿಕೊಳ್ಳುವುದು ನಿಮ್ಮೊಂದಿಗೆ, ನಿಮ್ಮ ಮೇಲಿರುವ ಪ್ರೀತಿಯನ್ನು ವ್ಯಕ್ತಪಡಿಸಲು ಪದಗಳೇ ಸಾಲದು. ನೀವು ನನ್ನ ಜೀವನದಲ್ಲಿ ಶ್ರೇಷ್ಠ ಅಂಶಗಳನ್ನೇ ದಯಪಾಲಿಸಿದ್ದೀರಿ. ನಿಮ್ಮ ಸಮಯ, ನಿಮ್ಮ ಪ್ರೀತಿ ಮತ್ತು ನಿರಂತರ ಕಾಳಜಿ. ಸದಾ ಬೆಂಬಲ ನೀಡಿದ್ದಕ್ಕೆ, ಮಾದರಿಯಾಗಿ ಮುನ್ನಡೆಸಿದ್ದಕ್ಕಾಗಿ ಧನ್ಯವಾದಗಳು. ನಾನು ನಿಮ್ಮನ್ನು ಮನಸಾರೆ ಪ್ರೀತಿಸುತ್ತೇನೆ' ಎಂದು ಹೇಳಿದ್ದಾರೆ.

ಕಳೆದ 25 ವರ್ಷಗಳಿಂದ ಬಾಲಿವುಡ್ ಚಿತ್ರರಂಗದಲ್ಲಿರುವ ಸುನಿಲ್ ಶೆಟ್ಟಿ, 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೆ 'ಮೊಹ್ರಾ', 'ಬಾರ್ಡರ್', 'ಧಡ್ಕನ್' ಸೇರಿದಂತೆ ಹಲವಾರು ಜನಪ್ರಿಯ ಚಿತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.

ಏತನ್ಮಧ್ಯೆ ಆಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್. ರಾಹುಲ್ ನಡುವೆ ಸ್ನೇಹದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಮಾತುಗಳು ಹರಿದಾಡುತ್ತಿವೆ. ಹಲವು ಬಾರಿ ಇವರಿಬ್ಬರು ಹಂಚಿಕೊಂಡಿರುವ ಫೋಟೊಗಳೂ ಚರ್ಚೆಗೆ ಗ್ರಾಸವಾಗಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು