ಸೋಮವಾರ, ಅಕ್ಟೋಬರ್ 25, 2021
25 °C

ನಟಿ ಪಾಯಲ್‌ ಘೋಷ್‌ ಮೇಲೆ ಹಲ್ಲೆಗೆ ಯತ್ನ: ಅಪಾಯದಿಂದ ಪಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

’ನನ್ನ ಮೇಲೆ ಅಪರಿಚಿತರು ಹಲ್ಲೆಗೆ ಯತ್ನಿಸಿದ್ದು, ಅಪಾಯದಿಂದ ಪಾರಾಗಿರುವೆ’ ಎಂದು ಬಾಲಿವುಡ್‌ ನಟಿ ಪಾಯಲ್‌ ಘೋಷ್‌ ಹೇಳಿದ್ದಾರೆ. 

ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಹೇಳಿಕೆ ನೀಡಿರುವ ಅವರು ಈ ದಿನ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡುವುದಾಗಿ ಪಾಯಲ್‌ ಹೇಳಿದ್ದಾರೆ. 

’ಸೋಮವಾರ ಮೆಡಿಕಲ್‌ ಶಾಪ್‌ನಿಂದ ಔಷಧಿಗಳ ಖರೀದಿಸಿ ಕಾರು ಹತ್ತುವ ಸಮಯದಲ್ಲಿ ಅಪರಿಚಿತ ಮುಸುಕುದಾರಿಗಳು ನನ್ನ ಮೇಲೆ ಹಲ್ಲೆಗೆ ಯತ್ನಿಸಿದರು. ಅವರ ಕೈಯಲ್ಲಿ ಒಂದು ಬಾಟಲಿ ಇತ್ತು, ಬಹುಶಃ ಅದರಲ್ಲಿ ಆ್ಯಸಿಡ್‌ ಇರಬಹುದು ಎಂದುಕೊಂಡು ನಾನು ಜೋರಾಗಿ ಕೂಗಿದೆ, ಅವರಲ್ಲೊಬ್ಬ ನನ್ನ ಕಡೆ ಕಬ್ಬಿಣದ ರಾಡ್‌ ಎಸೆದ. ನಂತರ ಅವರು ಅಲ್ಲಿಂದ ಪರಾರಿಯಾದರು. ಆ ರಾಡ್‌ ನನ್ನ ಎಡಗೈಗೆ ಬಡಿಯಿತು, ಕೂಡಲೇ ನಾನು ಕಾರು ಹತ್ತಿ ಮನೆಗೆ ತೆರಳಿದೆ’ ಎಂದು ಪಾಯಲ್‌  ವಿಡಿಯೊದಲ್ಲಿ ಹೇಳಿದ್ದಾರೆ. 

ನನ್ನ ಎಡಗೈಗೆ ಸಣ್ಣ ಗಾಯವಾಗಿದೆ ವೈದ್ಯರಿಂದ ಚಿಕಿತ್ಸೆ ಪಡೆದುಕೊಂಡಿರುವೆ ಎಂದು ಪಾಯಲ್‌ ಹೇಳಿದ್ದಾರೆ. ವಿಡಿಯೊದಲ್ಲಿ ಗಾಯವಾಗಿರುವ ಕೈಯನ್ನು  ಅಭಿಮಾನಿಗಳಿಗೆ ತೋರಿಸಿದ್ದಾರೆ. 

ಈ ಹಿಂದೆ ಪಾಯಲ್‌ ಬಾಲಿವುಡ್‌ ನಿರ್ದೇಶಕ ಅನುರಾಗ್‌ ಕಶ್ಯಪ್‌ ಮೇಲೆ ಅತ್ಯಾಚಾರದ ಆರೋಪ ಮಾಡಿದ್ದರು. ತೆಲುಗು ನಟ ಜ್ಯೂನಿಯರ್‌ ಎನ್‌ಟಿಆರ್‌ ವಿರುದ್ಧ ಕೂಡ ಟೀಕೆ ಮಾಡಿದ್ದರು. ತೆಲುಗು ಸಿನಿಮಾ ಕ್ಷೇತ್ರದಲ್ಲಿ ಪಕ್ಷಪಾತ ಇದೆ ಎಂದು ಕೂಡ ಪಾಯಲ್‌ ಆರೋಪಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು