ಸೋಮವಾರ, ಡಿಸೆಂಬರ್ 9, 2019
17 °C

ಜೀ ಕನ್ನಡದಲ್ಲಿ ಪೈಲ್ವಾನ ಆಡಿಯೊ ಸಮಾರಂಭ

Published:
Updated:
Prajavani

ಬೆಂಗಳೂರಿನ ಕೋರಮಂಗಲದ ಇಂಡೋರ್ ಸ್ಟೇಡಿಯಂನಲ್ಲಿ ಇದೇ ತಿಂಗಳ 18ರಂದು ನಡೆದ ಕಿಚ್ಚ ಸುದೀಪ್ ನಟನೆಯ ಪೈಲ್ವಾನ್ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವು ಜೀ ಕನ್ನಡ ವಾಹಿನಿಯಲ್ಲಿ ಭಾನುವಾರ (ಆ.25) ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. 
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಪೈಲ್ವಾನ್ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಮಾಡಿದರು. ಸುದೀಪ್ ಮತ್ತು ಪುನೀತ್ ಅವರ ಬಾಲ್ಯದ ಚಿತ್ರವನ್ನು ಅಭಿಮಾನಿಗಳ ಎದುರು ಪ್ರದರ್ಶಿಸಲಾಯಿತು. ಮಾಸ್ಟರ್ ಗಣೇಶ್ ಆಚಾರ್ಯ ನಟರೊಂದಿಗೆ ‘ಬಾರೊ ಪೈಲ್ವಾನ್’ ಹಾಡಿಗೆ ಹೆಜ್ಜೆ ಹಾಕಿದರು. ಇದು ಅವರು ನೃತ್ಯ ಸಂಯೋಜನೆ ಮಾಡಿದ ಅತಿದೊಡ್ಡ ಹಾಡು ಎಂದು ಹೇಳಿಕೊಂಡರು.
ಕಾರ್ತಿಕ್ ಗೌಡ, ಯೋಗಿ, ಸಂತೋಷ್ ಆನಂದ್ ರಾಮ್, ಬಾಲಿವುಡ್ ಕೊರಿಯೊಗ್ರಾಫರ್ ಮಾಸ್ಟರ್ ಗಣೇಶ್ ಆಚಾರ್ಯ, ವಿ.ನಾಗೇಂದ್ರ ಪ್ರಸಾದ್ ಮತ್ತು ರಿಷಬ್ ಶೆಟ್ಟಿ ಸೇರಿದಂತೆ ಚಿತ್ರರಂಗದ ಹಲವರು ಈ ಸಮಾರಂಭಕ್ಕೆ ಸಾಕ್ಷಿಯಾದರು. ವಿವಿಧ ಚಲನಚಿತ್ರೋದ್ಯಮಗಳಲ್ಲಿ ಕಿಚ್ಚ ಅವರ ಜೀವನ ಪಯಣದ ವಿಡಿಯೊ ತುಣುಕಗಳನ್ನು ಪ್ರದರ್ಶಿಸಲಾಯಿತು. 
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ‘ಬಂದ ನೋಡೋ ಪೈಲ್ವಾನ್’ ಮತ್ತು ಇತರ ಹಾಡುಗಳು ಪ್ರೇಕ್ಷಕರನ್ನು ರಂಜಿಸಿದವು. ಹಿನ್ನೆಲೆ ಗಾಯಕ ವ್ಯಾಸ ರಾಜ್ ಮತ್ತು ಅರ್ಜುನ್ ಜನ್ಯಾ ಪ್ರಸ್ತುತಪಡಿಸಿರುವ ‘ಬಾರೋ ಪೈಲ್ವಾನ್’ ಹಾಡನ್ನು ಯೂಟ್ಯೂಬ್‌ನಲ್ಲಿ 2.5 ಲಕ್ಷ ಮಂದಿ ವೀಕ್ಷಿಸಿದ್ದಾರೆ.ಬಹು ಕೋಟಿ ವೆಚ್ಚದ ಈ ಚಲನಚಿತ್ರವನ್ನು ಎಸ್. ಕೃಷ್ಣ ನಿರ್ದೇಶನ ಮಾಡಿದ್ದಾರೆ. ನಿರ್ಮಾಪಕಿ ಸ್ವಪ್ನಾ ಕೃಷ್ಣ ಬಂಡವಾಳ ಹೂಡಿದ್ದಾರೆ. ಬಾಲಿವುಡ್ ನಟ ಸುನಿಲ್ ಶೆಟ್ಟಿ, ಆಕಾಂಕ್ಷ ಸಿಂಗ್, ಸುಶಾಂತ್ ಸಿಂಗ್ ಮತ್ತು ಅವಿನಾಶ್ ಸೇರಿದಂತೆ ಪ್ರಮುಖ ತಾರೆಯರು ಕಾಣಿಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು