ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಂಭಿಕ ವಾರಾಂತ್ಯದಲ್ಲೇ ₹40.71 ಕೋಟಿ ಗಳಿಸಿದ 'ಡ್ರೀಮ್ ಗರ್ಲ್ 2'

Published 28 ಆಗಸ್ಟ್ 2023, 9:06 IST
Last Updated 28 ಆಗಸ್ಟ್ 2023, 9:06 IST
ಅಕ್ಷರ ಗಾತ್ರ

ಮುಂಬೈ: ಆಯುಷ್ಮಾನ್ ಖುರಾನಾ, ಅನನ್ಯಾ ಪಾಂಡೆ ಮುಖ್ಯ ಭೂಮಿಕೆಯಲ್ಲಿರುವ ಹಿಂದಿಯ 'ಡ್ರೀಮ್ ಗರ್ಲ್ 2’ ಚಿತ್ರವು ಮೊದಲ ವಾರಾಂತ್ಯದಲ್ಲೇ ದೇಶದ ಬಾಕ್ಸ್ ಆಫೀಸ್‌ನಲ್ಲಿ ₹40.71 ಕೋಟಿ ಗಳಿಕೆ ಕಂಡಿದೆ ಎಂದು ನಿರ್ಮಾಪಕರು ಸೋಮವಾರ ಘೋಷಿಸಿದ್ದಾರೆ.

ರಾಜ್ ಶಾಂಡಿಲ್ಯ ನಿರ್ದೇಶನದ ಹಾಸ್ಯ ಪ್ರಧಾನ ಚಿತ್ರ ಇದಾಗಿದ್ದು, ಏಕ್ತಾ ಆರ್ ಕಪೂರ್ ಅವರ ಬಾಲಾಜಿ ಮೋಷನ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ. ಚಿತ್ರ ನಿರ್ಮಾಣ ಸಂಸ್ಥೆ ತನ್ನ ಅಧಿಕೃತ ಎಕ್ಸ್ ಪುಟದಲ್ಲಿ ಚಿತ್ರದ ಬಾಕ್ಸ್ ಆಫೀಸ್ ಗಳಿಕೆಯ ಮಾಹಿತಿ ಹಂಚಿಕೊಂಡಿದೆ.

ಪ್ರೊಡಕ್ಷನ್ ಹೌಸ್ ಪ್ರಕಾರ, ‘ಡ್ರೀಮ್ ಗರ್ಲ್ 2’ಬಿಡುಗಡೆಯಾದ ಮೂರನೇ ದಿನದಲ್ಲಿ ₹16 ಕೋಟಿ ಗಳಿಸಿದ್ದು, ಈವರೆಗಿನ ಬಾಕ್ಸ್ ಆಫೀಸ್ ಒಟ್ಟು ಗಳಿಕೆಯನ್ನು ₹24.71ಕೋಟಿಯಿಂದ ₹40.71ಕೋಟಿಗೆ ಹೆಚ್ಚಿಸಿಕೊಂಡಿದೆ.

ಆಯುಷ್ಮಾನ್ ಖುರಾನಾ, ಅನನ್ಯಾ ಪಾಂಡೆ ಜೊತೆಗೆ ಚಿತ್ರದಲ್ಲಿ ಪರೇಶ್ ರಾವಲ್, ಅನ್ನು ಕಪೂರ್, ರಾಜ್ಪಾಲ್ ಯಾದವ್, ವಿಜಯ್ ರಾಜ್, ಅಸ್ರಾನಿ, ಅಭಿಷೇಕ್ ಬ್ಯಾನರ್ಜಿ, ಮನ್ಜೋತ್ ಸಿಂಗ್ ಮತ್ತು ಸೀಮಾ ಪಹ್ವಾ ಕೂಡ ನಟಿಸಿದ್ದಾರೆ. ಆಗಸ್ಟ್ 25ರಂದು ಚಿತ್ರ ತೆರೆ ಕಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT