ಮಂಗಳವಾರ, ಜೂನ್ 15, 2021
23 °C

ರಿಮೇಕ್‌ ಸಿನಿಮಾದಲ್ಲಿ ಒಂದಾಗಲಿದ್ದಾರಾ ಪವನ್ ಕಲ್ಯಾಣ–ವಿಜಯ್ ಸೇತುಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಲೆಯಾಳಂನ ಸೂಪರ್ ಹಿಟ್ ಸಿನಿಮಾ ‘ಅಯ್ಯಪ್ಪನುಂ ಕೋಶಿಯುಂ’ನ ತೆಲುಗು ರಿಮೇಕ್ ಕುರಿತು ಕಳೆದ ಕೆಲವು ತಿಂಗಳಿನಿಂದ ಚರ್ಚೆಗಳು ನಡೆಯುತ್ತಲೇ ಇವೆ. ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಈ ಸಿನಿಮಾದೊಂದಿಗೆ ಅನೇಕ ಸ್ಟಾರ್ ನಟರ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ ಯಾವ ನಟರೂ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಸದ್ಯದ ಗಾಳಿಸುದ್ದಿಯ ಪ್ರಕಾರ ಈ ಸಿನಿಮಾದಲ್ಲಿ ನಟಿಸಲು ಪವನ್‌ ಕಲ್ಯಾಣ ಆಸಕ್ತಿ ತೋರಿದ್ದಾರಂತೆ. 

ಮಲೆಯಾಳಂ ಸಿನಿಮಾದ ರಿಮೇಕ್‌ನಲ್ಲಿ ಪವನ್‌ ಕಲ್ಯಾಣ್‌ ನಾಯಕನಾಗಲಿದ್ದು ಇನ್ನೊಬ್ಬ ನಾಯಕನ ಪಾತ್ರಕ್ಕೆ ಕಾಲಿವುಡ್ ನಟ ವಿಜಯ್ ಸೇತುಪತಿ ಬಣ್ಣ ಹಚ್ಚಲಿದ್ದಾರಂತೆ. ವಿಜಯ್ ಈಗಾಗಲೇ ದಳಪತಿ ವಿಜಯ್ ನಟನೆಯ ‘ಮಾಸ್ಟರ್’ ಸಿನಿಮಾದಲ್ಲಿ ನೆಗೆಟಿವ್ ಪಾತ್ರ ಮಾಡಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅಲ್ಲದೇ ಸೇತುಪತಿ ರಜನಿಕಾಂತ್ ಅಭಿನಯದ ‘ಪೆಟ್ಟಾ’ ಹಾಗೂ ಚಿರಂಜೀವಿ ನಟನೆಯ ‘ಸೈರಾ’ ಸಿನಿಮಾದಲ್ಲೂ ನಟಿಸಿದ್ದರು. ಸದ್ಯದ ಗಾಳಿಸುದ್ದಿಯ ಪ್ರಕಾರ ವಿಜಯ್‌ ಸೇತುಪತಿ ಪವನ್ ಕಲ್ಯಾಣ ಜೊತೆ ನಟಿಸಲು ಸಜ್ಜಾಗಿದ್ದಾರಂತೆ. 

ಈ ಸುದ್ದಿ ನಿಜವಾಗಲಿ ಎಂಬುದು ಪವನ್ ಹಾಗೂ ವಿಜಯ್ ಅಭಿಮಾನಿಗಳ ಮಾತು. ಅಯ್ಯಪ್ಪನುಂ ಕೋಶಿಯುಂ ಸಿನಿಮಾದಲ್ಲಿ ಸಿನಿಮಾದಲ್ಲಿ ಪ್ರಥ್ವಿರಾಜ್ ಹಾಗೂ ಬಿಜು ಮೆನನ್ ನಟಿಸಿದ್ದರು. ಈ ಸಿನಿಮಾ ಹಿಂದಿಗೂ ರಿಮೇಕ್ ಆಗಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು