ಭಾನುವಾರ, ಜನವರಿ 24, 2021
28 °C

ದಗ್ಗುಬಾಟಿ – ಪವನ್‌ ಕಲ್ಯಾಣ್‌: ಆವುವತ್ತ ಅಯ್ಯಪ್ಪನುಮ್‌ ಕೋಷಿಯುಮ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಯ್ಯಪ್ಪನುಮ್‌ ಕೋಷಿಯುಮ್‌ ಮಲೆಯಾಳಂನಲ್ಲಿ ಸೂಪರ್‌ ಹಿಟ್‌ ಚಿತ್ರ. ಅದನ್ನೀಗ ತೆಲುಗಿನಲ್ಲಿ ತೆರೆಯ ಮೇಲೆ ತರಲು ಸಜ್ಜಾಗಿದ್ದಾರೆ ರಾಣಾ ದಗ್ಗುಬಾಟಿ ಮತ್ತು ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌. ಇತ್ತೀಚೆಗಷ್ಟೇ ಔಪಚಾರಿಕ ಪೂಜಾ ಕಾರ್ಯಕ್ರಮ ನಡೆಸಿ ಚಿತ್ರದ ಕೆಲಸಗಳನ್ನು ಕೈಗೆತ್ತಿಗೊಳ್ಳಲಾಗಿದೆ ಎನ್ನುತ್ತವೆ ಟಾಲಿವುಡ್‌ ಮೂಲಗಳು. ಚಿತ್ರೀಕರಣ ಜನವರಿ ಮೂರನೇ ವಾರದಿಂದ ಆರಂಭವಾಗಲಿದೆ. 

ಈ ರಿಮೇಕನ್ನು ಅಪ್ಪಾಟ್ಲೋ ಒಕಾಡುಂಡೇವಾಡು ಚಿತ್ರ ನಿರ್ದೇಶಿಸಿದ ಸಾಗರ್‌ ಕೆ. ಚಂದ್ರ ಅವರು ನಿರ್ದೇಶಿಸುತ್ತಿದ್ದಾರೆ. ಸಿತಾರಾ ಎಂಟರ್‌ಟೈನ್‌ಮೆಂಟ್‌ ಲಾಂಛನದ ಅಡಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಪವನ್‌ ಕಲ್ಯಾಣ್ ಅವರು ಸದ್ಯ ‘ವಕೀಲ್‌ಸಾಬ್‌’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನೊಂದೆಡೆ ‘ಕ್ರಿಷ್‌’ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಅದರ ನಿರ್ದೇಶಕರಿಗೆ ಕೊರೊನಾ ಪಾಸಿಟಿವ್‌ ಕಂಡುಬಂದ ಕಾರಣ ಚಿತ್ರೀಕರಣ ವಿಳಂಬವಾಗಿದೆ. ಹಾಗಾಗಿ ಪವನ್‌ ಅವರು ಮೊದಲ ಹಂತದ ಚಿತ್ರೀಕರಣಕ್ಕೆ ಅಯ್ಯಪ್ಪನುಮ್‌ ತಂಡವನ್ನು ಸೇರಲಿದ್ದಾರೆ. ಮೂಲ ಚಿತ್ರದ ಪ್ರಥ್ವಿರಾಜ್‌ ಸುಕುಮಾರನ್‌ ಪಾತ್ರದಲ್ಲಿ ರಾಣಾ ದಗ್ಗುಬಾಟಿ ಕಾಣಿಸಿಕೊಳ್ಳಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು