ಭಾನುವಾರ, ಮೇ 29, 2022
31 °C

ಜ.26ಕ್ಕೆ ವೂಟ್‌ ಸೆಲೆಕ್ಟ್‌ನಲ್ಲಿ ‘ಬಡವ ರಾಸ್ಕಲ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧನಂಜಯ್‌ ಹಾಗೂ ಅಮೃತ ಅಯ್ಯಂಗಾರ್‌

ಕಳೆದ ಡಿ.24ರಂದು ತೆರೆ ಕಂಡಿದ್ದ ಶಂಕರ್‌ ಗುರು ನಿರ್ದೇಶನದ, ‘ಡಾಲಿ’ ಧನಂಜಯ್‌ ನಟನೆಯ ‘ಬಡವ ರಾಸ್ಕಲ್‌’ ಸಿನಿಮಾ ಜ.26ರಂದು ಒಟಿಟಿ ವೇದಿಕೆ ವೂಟ್‌ ಸೆಲೆಕ್ಟ್‌ನಲ್ಲಿ ಬಿಡುಗಡೆಯಾಗಲಿದೆ.

ಧನಂಜಯ್‌ ನಟಿಸಿ, ನಿರ್ಮಾಣ ಮಾಡಿದ ಮೊದಲ ಚಿತ್ರ ಇದಾಗಿದೆ. ಮಿಡ್ಲ್‌ ಕ್ಲಾಸ್‌ ಎಂಟರ್‌ಟೈನರ್‌ ಆಗಿದ್ದ ಈ ಚಿತ್ರವು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಆ್ಯಕ್ಷನ್‌, ಮಾಸ್‌ ಸಿನಿಮಾಗಳ ಜೊತೆಗೆ ಭಾವನಾತ್ಮಕ ಸಿನಿಮಾಗಳಲ್ಲೂ ಧನಂಜಯ್‌ ಮಿಂಚುತ್ತಾರೆ ಎನ್ನುವುದಕ್ಕೆ ಸಾಕ್ಷ್ಯವಾಗಿ ‘ರತ್ನನ್‌ ಪ್ರಪಂಚ’ ಹಾಗೂ ‘ಬಡವ ರಾಸ್ಕಲ್‌’ ಪ್ರೇಕ್ಷಕರ ಎದುರಿಗಿತ್ತು. ಧನಂಜಯ್‌ ಅವರಿಗೆ ಜೋಡಿಯಾಗಿ ಈ ಸಿನಿಮಾದಲ್ಲಿ ಅಮೃತ ಅಯ್ಯಂಗಾರ್‌ ನಟಿಸಿದ್ದರು. ಧನಂಜಯ್‌ ಅವರ ತಂದೆ–ತಾಯಿ ಪಾತ್ರದಲ್ಲಿ ರಂಗಾಯಣ ರಘು ಹಾಗೂ ತಾರಾ ನಟಿಸಿದ್ದರು. 

ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಕಾರಣದಿಂದಾಗಿ ರಾತ್ರಿ ಕರ್ಫ್ಯೂ, ವಾರಾಂತ್ಯದ ಕರ್ಫ್ಯೂ ಸೇರಿದಂತೆ ಹಲವು ನಿರ್ಬಂಧಗಳನ್ನು ಸರ್ಕಾರ ಹೇರಿದೆ. ಸೋಮವಾರದಿಂದ ಶುಕ್ರವಾರದವರೆಗೆ ಚಿತ್ರಮಂದಿರಗಳಲ್ಲಿ ಶೇ.50ರಷ್ಟೇ ಆಸನ ಭರ್ತಿಗೆ ಅವಕಾಶ ನೀಡಿರುವುದು ಹಾಗೂ ವಾರಾಂತ್ಯದಲ್ಲಿ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡದೇ ಇರುವ ಕಾರಣದಿಂದಾಗಿ ಬಿಡುಗಡೆಯಾದ ತಿಂಗಳೊಳಗೇ ಚಿತ್ರವನ್ನು ಒಟಿಟಿಗೆ ನೀಡಲಾಗಿದೆ.         

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು