ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bagheera | ಡಿ.17ಕ್ಕೆ ‘ಬಘೀರ’ ಟೀಸರ್‌

Published 14 ಡಿಸೆಂಬರ್ 2023, 23:30 IST
Last Updated 14 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

2021ರಲ್ಲಿ ತೆರೆಕಂಡ ‘ಮದಗಜ’ ಸಿನಿಮಾ ಬಳಿಕ ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅವರ ಯಾವುದೇ ಸಿನಿಮಾ ತೆರೆಕಂಡಿಲ್ಲ. ಇದೀಗ ‘ಬಘೀರ’ನಾಗಿ ತೆರೆ ಮೇಲೆ ಬರಲು ಶ್ರೀಮುರಳಿ ಸಜ್ಜಾಗಿದ್ದಾರೆ. 

‘ಉಗ್ರಂ’ ಸಿನಿಮಾ ಬಳಿಕ ಪ್ರಶಾಂತ್‌ ನೀಲ್‌ ಹಾಗೂ ಶ್ರೀಮುರಳಿ ಕಾಂಬಿನೇಷನ್‌ನಲ್ಲಿ ಈ ಸಿನಿಮಾ ಮೂಡಿಬಂದಿದೆ. ‘ಬಘೀರ’ನಿಗೆ ನಟಿ ರುಕ್ಮಿಣಿ ವಸಂತ್‌ ಜೋಡಿಯಾಗಿದ್ದಾರೆ. 

ಡಾ. ಸೂರಿ ಆ್ಯಕ್ಷನ್‌ ಕಟ್‌ ಹೇಳಿರುವ ‘ಬಘೀರ’ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣ ಮಾಡಿದ್ದು, ಚಿತ್ರದಲ್ಲಿ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಶ್ರೀಮುರಳಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಕಥೆ ಬರೆದಿದ್ದು, ಡಾ. ಸೂರಿ ಅವರ ಚಿತ್ರಕಥೆ ಈ ಸಿನಿಮಾವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT