ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಗರ್‌: ಮೈಕ್‌ ಟೈಸನ್‌ಗೆ ದನಿ ನೀಡಲಿದ್ದಾರೆ ಬಾಲಕೃಷ್ಣ?

Last Updated 6 ಅಕ್ಟೋಬರ್ 2021, 9:38 IST
ಅಕ್ಷರ ಗಾತ್ರ

ಅಮೆರಿಕದ ಖ್ಯಾತ ಬಾಕ್ಸರ್‌ ಮೈಕ್‌ ಟೈಸನ್‌ ಟಾಲಿವುಡ್‌ನ ’ಲೈಗರ್‌’ ಸಿನಿಮಾದಲ್ಲಿ ನಟಿಸುತ್ತಿದ್ದುಇವರಿಗೆ ನಂದಮೂರಿ ಬಾಲಕೃಷ್ಣ ಡಬ್ಬಿಂಗ್ ಮಾಡಲಿದ್ದಾರೆ ಎಂಬ ವಿಷಯ ಈಗ ಟಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ.

ಲೈಗರ್‌ ಸಿನಿಮಾದಲ್ಲಿ ಟೈಸನ್‌ ವಿಶೇಷ ಪಾತ್ರದಲ್ಲಿ ನಟಿಸುತ್ತಿರುವುದು ಪಕ್ಕಾ ಆಗಿದೆ. ಟೈಸನ್‌ ಅವರಿಗೆ ಬಾಲಕೃಷ್ಣಧ್ವನಿ ನೀಡುವುದು ಬಹುತೇಕ ಖಚಿತವಾಗಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. ಲೈಗರ್‌ ಸಿನಿಮಾ ನಿರ್ದೇಶನ ಮಾಡುತ್ತಿರುವ ಪುರಿ ಜಗನ್ನಾಥ್ ಅವರು ಟೈಸನ್‌ ಅವರಿಗೆ ಧ್ವನಿ ನೀಡುವಂತೆ ಬಾಲಯ್ಯ ಅವರನ್ನು ಕೋರಿದ್ದರು. ಅದಕ್ಕೆ ಬಾಲಯ್ಯ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

ಬಾಲಯ್ಯ ಮತ್ತು ಪೂರಿ ಜಗನ್ನಾಥ್‌ ನಡುವೆ ಉತ್ತಮ ಬಾಂಧವ್ಯ ಇದೆ. ಬಾಲಕೃಷ್ಣ ಅವರ ಸಿನಿಮಾ ಪ್ರಚಾರಕ್ಕೆ ಪುರಿ ಜಗನ್ನಾಥ್‌ ಹಾಜರಿ ಇದ್ದೆ ಇರುತ್ತದೆ. ಹಾಗೇ ಪುರಿ ಜಗನ್ನಾಥ್‌ ಸಿನಿಮಾಗಳ ಪ್ರಚಾರದಲ್ಲೂ ಬಾಲಯ್ಯ ತಪ್ಪದೇ ಭಾಗವಹಿಸುತ್ತಾರೆ.

ಪುರಿ ಜಗನ್ನಾಥ್, ಕರಣ್ ಜೋಹರ್, ಚಾರ್ಮಿ ಕೌರ್, ಅಪೂರ್ವ ಮೆಹ್ತಾ ಜಂಟಿಯಾಗಿ ಲೈಗರ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಲಯನ್‌ ಮತ್ತು ಟೈಗರ್‌ ಶಬ್ದಗಳನ್ನು ಜೋಡಿಸಿ ಲೈಗರ್‌ ಶೀರ್ಷಿಕೆ ಇಡಲಾಗಿದೆ. ಹುಲಿ– ಸಿಂಹದ ಸಂಕರ ತಳಿ ಎಂಬ ಅರ್ಥ ಕೊಡುತ್ತದೆ. ಟ್ಯಾಗ್‌ಲೈನ್‌ನಲ್ಲೂ ‘ಸಾಲಾ ಕ್ರಾಸ್‌ ಬ್ರೀಡ್‌’ ಎಂದು ಹೇಳಲಾಗಿದೆ.

ಪ್ಯಾನ್ ಇಂಡಿಯಾ ಪರಿಕಲ್ಪನೆಯ ಈ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇದೊಂದು ಆ್ಯಕ್ಷನ್‌ ಸಿನಿಮಾ ಆಗಿದ್ದು, ನಟ ವಿಜಯ್‌ ದೇವರಕೊಂಡ ಬಾಕ್ಸರ್‌ ಪಾತ್ರ ಮಾಡಿದ್ದಾರೆ.

ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಅನನ್ಯಾ ಪಾಂಡೆ,ರಮ್ಯಾ ಕೃಷ್ಣನ್, ರೋನಿತ್ ರಾಯ್, ವಿಶು ರೆಡ್ಡಿ, ಆಲಿ, ಮಕರಂದ್ ದೇಶಪಾಂಡೆ, ಗೆಟಪ್ ಶ್ರೀನು ನಟಿಸಿದ್ದಾರೆ.

ಬಹುನಿರೀಕ್ಷಿತ ಈ ಸಿನಿಮಾಗೆ ವಿಷ್ಣು ಶರ್ಮಾ ಛಾಯಾಗ್ರಹಣ, ಜಾನಿ ಶೇಖ್ ಬಾಷಾ ಕಲಾ ನಿರ್ದೇಶನ, ಜುನೈದ್ ಸಿದ್ಧಿಕಿ ಸಂಕಲನ ಮಾಡುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT