ಪತ್ರಕರ್ತ ಹಾಗೂ ಲೇಖಕ ಕುಮಾರ ಬೇಂದ್ರೆ ನಿರ್ದೇಶನದ ‘ಬಂಧಮುಕ್ತ’ ಚಿತ್ರದ ಮೊದಲ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಡು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.

‘ಜೀವ ಬಯಸಿದ ಭಾವವೇ ಎದೆಯಲ್ಲರಳಿ ನಿಂತು..’ ಎಂಬ ಈ ಗೀತೆಗೆ ನಿರ್ದೇಶಕರದ್ದೇ ಸಾಹಿತ್ಯವಿದ್ದು, ಸಿದ್ದೇಶ್ವರ ಕಟಕೋಳ ಸಂಗೀತ, ರಾಧಿಕಾ ಕುಲಕರ್ಣಿ ಅವರ ಧ್ವನಿಯಿದೆ.

‘ಈ ಚಿತ್ರ ಮಹಿಳಾ ಸಬಲೀಕರಣದ ಆಶಯವನ್ನು ಹೊಂದಿದ್ದು, ಬಡ ಯುವತಿಯೊಬ್ಬಳು ವೈದ್ಯಕೀಯ ಶಿಕ್ಷಣ ಪಡೆಯುವುದಕ್ಕಾಗಿ ಮಾಡುವ ಹೋರಾಟದ ಕಥೆ ಇದರಲ್ಲಿದೆ. ಸಾಮಾಜಿಕ ಜವಾಬ್ದಾರಿಯನ್ನು ಹೊತ್ತ ಇಂತಹ ಸದಭಿರುಚಿಯ ಚಿತ್ರವನ್ನು ಪ್ರೇಕ್ಷಕರು ವೀಕ್ಷಿಸುವ ಮೂಲಕ ಅದರ ಉದ್ದೇಶವನ್ನು ಈಡೇರಿಸಬೇಕು’ ಎಂದು ಲಾಡ್ ಹೇಳಿದರು.

ಶಿವಪುತ್ರಪ್ಪ ಆಶಿ ಬಂಡವಾಳ ಹೂಡಿದ್ದಾರೆ. ಐಶ್ವರ್ಯ ನಾಗರಾಜ್, ಸನತ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ವಿಘ್ನೇಶ್ ಮಲಚಮಿ ಛಾಯಾಚಿತ್ರಗ್ರಹಣ, ಸತ್ಯಜಿತ್ ಸಂಕಲನ, ಬಹುರೂಪಿ ಹಿನ್ನೆಲೆ ಸಂಗೀತವಿದೆ. ಫೆಬ್ರುವರಿಯಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ಚಿತ್ರತಂಡ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.