ಶಾಂತೊ ಖಾನ್ ಜೊತೆ ಕೆಲಸ ಮಾಡಿದ್ದ ಬಂಗಾಳದ ನಟರು ಹತ್ಯೆಯ ಕಾರಣಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದು ಅವು ಬೇರೆ ದೇಶದ ಆಂತರಿಕ ವಿಷಯಗಳಾಗಿವೆ ಎಂದು ಹೇಳಿದ್ದಾರೆ.
ಕಲೆ ಮತ್ತು ಸೃಜನಶೀಲತೆ ಮೇಲೆ ದಾಳಿ ನಡೆಯಬಾರದು. ಶಾಂತೊ ಖಾನ್ ಹಾಗೂ ಅವರ ತಂದೆಯನ್ನು ಕೊಲ್ಲಲಾಗಿದೆ ಎಂದು ತಿಳಿದು ನನಗೆ ದುಃಖವಾಗಿದೆ ಎಂದು ಬಂಗಾಳದ ನಟ ರಜತಾಭ ದತ್ತಾ ಹೇಳಿದರು.
ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದರು. 2022ರಲ್ಲಿ ತೆರಕಂಡ ಬಿಕ್ಕೋವ್ ಚಿತ್ರ ಅವರ ಜನಪ್ರಿಯ ಸಿನಿಮಾವಾಗಿತ್ತು.