ಮುಂಬೈ: ನೀಲಿ ಚಿತ್ರಗಳಲ್ಲಿ ನಟಿಸಿರುವ ಬಾಂಗ್ಲಾದೇಶದ ಮಹಿಳೆಯೊಬ್ಬರು ಭಾರತದ ನಕಲಿ ಪಾಸ್‌ಪೋರ್ಟ್ ಹೊಂದಿದ ಆರೋಪದಡಿ ಮಹಾರಾಷ್ಟ್ರದ ಉಲ್ಲಾಸನಗರದ ಹಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಿಯಾ ಬಾರ್ಡೆ ಅಲಿಯಾಸ್ ಅರೋಹಿ ಬಾರ್ಡೆ ಎಂಬ ಮಹಿಳೆ ಕುಟುಂಬದೊಂದಿಗೆ ನವೇಲಿಯ ಅಂಬೆರ್ನಾಥ್ ಎಂಬಲ್ಲಿ ವಾಸಿಸುತ್ತಿದ್ದು, ನಕಲಿ ಪಾಸ್‌ಪೋರ್ಟ್ ಹೊಂದಿರುವುದನ್ನು ಪೊಲೀಸರು ಪತ್ತೆ ಮಾಡಿದ್ದರು.
ಈ ಕುರಿತು ತನಿಖೆ ಕೈಗೊಂಡಿರುವ ಪೊಲೀಸರಿಗೆ ಮಹತ್ವದ ಮಾಹಿತಿಗಳನ್ನು ಕಲೆಹಾಕಿದ್ದಾರೆ. ಅಮರಾವತಿ ನಿವಾಸಿಗಳ ಮಾಹಿತಿಯನ್ನು ನಕಲು ಮಾಡಿರುವ ರಿಯಾ, ನಕಲಿ ಪಾಸ್‌ಪೋರ್ಟ್ ಬಳಸಿ ಭಾರತದಲ್ಲಿ ಕುಟುಂಬದೊಂದಿಗೆ ಇದ್ದಾರೆ ಎಂದೆನ್ನಲಾಗಿದೆ.
ಆಮ್‌ರಸ್, ಬರ್ಕಾ ಬಾಬಿ, ವೈಫ್ ಸ್ವಾಪ್, ಕಾಮಿನಿ ರಿಟರ್ನ್ಸ್, ಮಿಸ್ ಛಾಯಾ ಚಿತ್ರಗಳಲ್ಲಿ ಅರೋಹಿ ಬಾರ್ಡೆ ನಟಿಸಿದ್ದಾರೆ.
ಇದೇ ರೀತಿ, ಮಹಾರಾಷ್ಟ್ರದ ಠಾಣೆಗೆ ಸೇರಿದ 23 ವರ್ಷದ ಮಹಿಳೆಯೊಬ್ಬರು ನಕಲಿ ಪಾಸ್‌ಪೋರ್ಟ್ ಹಾಗೂ ವಿಸಾ ಬಳಸಿ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದರು. ಈ ಕುರಿತೂ ಪ್ರಕರಣ ದಾಖಲಾಗಿತ್ತು. ನಗ್ಮಾ ನೂರ್ ಮಕ್ಸೂದ್ ಅಲಿ ಎಂಬ ಈ ಮಹಿಳೆ, ಆಧಾರ್, ಪ್ಯಾನ್ ಕಾರ್ಡ್‌ಗಳಲ್ಲಿ ತನ್ನ ಹೆಸರು ಬದಲಿಸಿ, ನಕಲಿ ಪಾಸ್‌ಪೋರ್ಟ್ ಪಡೆದಿದ್ದರು. ಈ ಕುರಿತು ಮಹಿಳೆ ಹಾಗೂ ಆಕೆಗೆ ಸಹಕರಿಸಿದ ವ್ಯಕ್ತಿಯ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದರು.