ಶನಿವಾರ, ಏಪ್ರಿಲ್ 1, 2023
23 °C
ಅಂತರರಾಷ್ಟ್ರೀಯ ಚಲನಚಿತ್ರೋತ್ಸವ l 300 ಸಿನಿಮಾಗಳ ಪ್ರದರ್ಶನ

ಸಿನಿಮಾ ನಿರ್ಮಾಣ ತಂತ್ರಜ್ಞಾನ ಚರ್ಚೆಗೂ ವೇದಿಕೆ: ಆರ್‌.ಅಶೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚಲನಚಿತ್ರಗಳ ತಯಾರಿಕೆಯ ಆಧುನಿಕ  ತಂತ್ರಜ್ಞಾನಗಳ ವಿನಿಮಯಕ್ಕಾಗಿ ವೇದಿಕೆ ಕಲ್ಪಿಸಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಚಲನಚಿತ್ರ ನಿರ್ಮಿಸಿದ ಹೆಸರಾಂತ ನಿರ್ದೇಶಕರು ಮತ್ತು ತಂತ್ರಜ್ಞರನ್ನು ಆಹ್ವಾನಿಸಲಾಗುವುದು. ಚಿತ್ರೋತ್ಸವ ಮಾರ್ಚ್‌ 23 ರಿಂದ 30 ರವರೆಗೆ ನಡೆಯಲಿದೆ ಎಂದು ಹೇಳಿದರು.

‘ಚಲನಚಿತ್ರಗಳ ವಿವಿಧ ವಿಭಾಗಗಳಲ್ಲಿ ಸ್ಪರ್ಧೆಯ ಪ್ರಶಸ್ತಿಗಳ ಬಹುಮಾನದ ಮೊತ್ತವನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ. 2–3 ದಿನಗಳಲ್ಲಿ ಪ್ರಶಸ್ತಿಯ ಮೊತ್ತವನ್ನು ನಿಗದಿ ಮಾಡಲಾಗುವುದು. ಈಗ ₹1 ಲಕ್ಷದಿಂದ ₹3 ಲಕ್ಷದವರೆಗೆ ಬಹುಮಾನಗಳ ಮೊತ್ತವಿದೆ. ಅದನ್ನು ₹5 ಲಕ್ಷದಿಂದ ₹10 ಲಕ್ಷಗಳಿಗೆ ಹೆಚ್ಚಿಸುವ ಉದ್ದೇಶವಿದೆ. ಮುಖ್ಯಮಂತ್ರಿಯವರ ಜತೆ ಚರ್ಚಿಸಿ ಒಳ್ಳೆಯ ಮೊತ್ತವನ್ನೇ ನಿಗದಿ ಮಾಡುತ್ತೇವೆ’ ಎಂದು ಅಶೋಕ ವಿವರಿಸಿದರು.

‘ಜ್ಯೂರಿಗಳ ಆಯ್ಕೆಗೆ ಸಮಿತಿಯನ್ನು ರಚಿಸಲಾಗುವುದು. ಒಳ್ಳೆಯ ರೀತಿಯಲ್ಲಿ ಆಯ್ಕೆ ಮಾಡಬೇಕು, ವಿವಾದಕ್ಕೆ ಕಾರಣ
ವಾಗಬಾರದು ಎಂದು ಸೂಚಿಸಿದ್ದೇನೆ. ಚಿತ್ರೋತ್ಸವದಲ್ಲಿ ಕನ್ನಡ ಚಲನಚಿತ್ರಗಳಿಗೂ ಆದ್ಯತೆ ನೀಡಬೇಕು. ಈ ಬಾರಿಯ ಚಿತ್ರೋತ್ಸವಕ್ಕೆ ₹4.49 ಕೋಟಿ ನೀಡಲಾಗುವುದು’ ಎಂದರು.

* ಮಾ.23 ರ ಸಂಜೆ 6 ಕ್ಕೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಮುಖ್ಯಮಂತ್ರಿ ಬೊಮ್ಮಾಯಿ ಅವರಿಂದ ಚಿತ್ರೋತ್ಸವದ ಉದ್ಘಾಟನೆ.

*ಮಾ.30 ರಂದು ರಾಜ್ಯಪಾಲರಿಂದ ಸಮಾರೋಪ ಭಾಷಣ ಮತ್ತು ಪ್ರಶಸ್ತಿ ವಿತರಣೆ. ನೆರೆ ರಾಜ್ಯಗಳ ಚಿತ್ರರಂಗದ ಗಣ್ಯರಿಗೆ ಆಹ್ವಾನ.

*ಒರಾಯನ್‌ ಮಾಲ್‌ನ 11 ಪರದೆಗಳಲ್ಲಿ ಚಿತ್ರಗಳ ಪ್ರದರ್ಶನ.

*300 ಸಿನಿಮಾಗಳ ಪ್ರದರ್ಶನ

*50 ಕ್ಕೂ ದೇಶಗಳ ಚಿತ್ರಗಳ ಪ್ರದರ್ಶನ

 

–––––––––––––––

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.