ಪಟ್ನಾ: ಭೋಜ್ಪುರಿ ನಟಿ ಅಮೃತಾ ಪಾಂಡೆ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅಮೃತಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಇಲ್ಲಿನ ಅದಾಮ್ಪುರದ ದಿವ್ಯಾಧರ್ಮ ಅಪಾರ್ಟ್ಮೆಂಟ್ನಲ್ಲಿ ಈ ಘಟನೆ ನಡೆದಿದೆ. ಅಮೃತಾ ಅವರಿಗೆ 27 ವರ್ಷ ವಯಸ್ಸಾಗಿತ್ತು.

ಅಮೃತಾ ಕೊಠಡಿಯಲ್ಲಿ ನೇಣು ಬಿಗಿದುಕೊಂಡಿದ್ದರು. ಇದನ್ನು ನೋಡಿದ ಕೂಡಲೇ ನೆರೆಯವರ ಸಹಾಯ ಪಡೆದು ಅವರನ್ನು ಕೆಳಗೆ ಇಳಿಸಿಸುವ ಪ್ರಯತ್ನ ಮಾಡಿದೆ. ಆದರೆ ಆ ವೇಳೆಗೆ ಮೃತಪಟ್ಟಿದ್ದರು. ನಂತರ ಪೊಲೀಸರಿಗೆ ಕರೆ ಮಾಡಿ ತಿಳಿಸಲಾಯಿತು ಎಂದು ಅಮೃತಾ ಸಹೋದರಿ ಹೇಳಿದ್ದಾರೆ.

ಭೋಜ್ಪುರಿ ಸಿನಿಮಾಗಳು ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಮೃತಾ ನಟಿಸಿದ್ದರು. ‘ಅವರ ಜೀವನ ಎರಡು ದೋಣಿಗಳ ಮೇಲಿದೆ. ನಾವು ನಮ್ಮ ದೋಣಿಯನ್ನು ಮುಳುಗಿಸುವ ಮೂಲಕ ಅವರ ಮಾರ್ಗವನ್ನು ಸುಲಭಗೊಳಿಸಿದ್ದೇವೆ’ ಎಂದು ಅಮೃತಾ ಸಾಯುವುದಕ್ಕೂ ಮುನ್ನ ಸ್ಟೇಟಸ್ ಹಾಕಿದ್ದರು.

ಈ ಘಟನೆ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.