ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಲ್ ಭುಲೈಯಾ 2 ಟ್ರೈಲರ್ ಬಿಡುಗಡೆ: ಭೂತವಾಗಿ ಬಂದ ಕೋಮಲ ಬೆಡಗಿ ಕಿಯಾರಾ

Last Updated 27 ಏಪ್ರಿಲ್ 2022, 12:43 IST
ಅಕ್ಷರ ಗಾತ್ರ

ಮುಂಬೈ:ಕಾಮಿಡಿ, ಹಾರರ್ ಕಥಾ ಹಂದರವುಳ್ಳ ನಟ ಕಾರ್ತಿಕ್ ಆರ್ಯನ್ ಅಭಿನಯದ ‘ಭೂಲ್ ಭುಲೈಯಾ2’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ಸಿನಿಪ್ರೇಮಿಗಳ ಮನ ಗೆದ್ದಿದೆ.

ಚಿತ್ರದ ಟ್ರೈಲರ್ ‘ಟಿ–ಸಿರೀಸ್’ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು ಒಂದೇ ದಿನದಲ್ಲಿ ಸುಮಾರು 3.3 ಕೋಟಿ ವೀಕ್ಷಣೆ ಕಂಡಿದೆ. ಭೂಲ್ ಭುಲೈಯಾ 2 ಮೇ 20 ಕ್ಕೆ ಬಿಡುಗಡೆಯಾಗಲಿದೆ.

ಈ ಹಿಂದೆ ಈ ಚಿತ್ರ ಮಾರ್ಚ್ 20 ಕ್ಕೆ ಬಿಡುಗಡೆಯಾಗುವುದಾಗಿ ಚಿತ್ರತಂಡ ತಿಳಿಸಿತ್ತು. ಆದರೆ, ಮಾರ್ಚ್ 25 ಕ್ಕೆ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ ಸಿನಿಮಾ ಬಿಡುಗಡೆಯಾಗುತ್ತದೆ ಎನ್ನುವ ದೃಷ್ಟಿಯಿಂದ ಎರಡೂ ಚಿತ್ರಗಳ ನಡುವಿನ ಘರ್ಷಣೆ ತಪ್ಪಿಸಲು ‘ಭೂಲ್ ಭುಲೈಯಾ2'ಮೇ 20 ಕ್ಕೆ ಬಿಡುಗಡೆಯಾಗಲಿದೆ.

‘ಭೂಲ್ ಭೂಲಿಯಾ 2', 2007 ರಲ್ಲಿ ತೆರೆಗೆ ಬಂದಿದ್ದ ಅಕ್ಷಯ್ ಕುಮಾರ್ ಹಾಗೂ ವಿದ್ಯಾ ಬಾಲನ್ಅಭಿನಯದ ಸೂಪರ್ ಹಿಟ್ ಕಾಮಿಡಿ ಚಿತ್ರ ‘ಭೂಲ್ ಭುಲೈಯಾ'ಸಿನಿಮಾದ ಸರಣಿಯಾಗಿದೆ.

ಇನ್ನು ‘ಭೂಲ್ ಭುಲೈಯಾ2‘ದಲ್ಲಿ ಕಾರ್ತಿಕ್ ಆರ್ಯನ್‌ಗೆ ಕಿಯಾರಾ ಅಡ್ವಾಣಿ ಹಾಗೂ ಟಬು ಜೊತೆಯಾಗಿದ್ದಾರೆ. ಅನೀಸ್ ಬಜ್ಮಿ ಅವರ ನಿರ್ದೇಶನವಿದ್ದು ಭೂಷಣ್ ಕುಮಾರ್, ಮುರದ್ ಕೇತಾನಿ ಹಾಗೂ ಕೃಷ್ಣ ಕುಮಾರ್ ನಿರ್ಮಾಣ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT