ಗುರುವಾರ , ಜನವರಿ 23, 2020
27 °C

ಶುಭ್‌ ಮಂಗಲ್‌ ಜ್ಯಾದಾ ಸಾವಧಾನ್‌: ಅತಿಥಿ ಪಾತ್ರದಲ್ಲಿ ಭೂಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

2017ರಲ್ಲಿ ಬಿಡುಗಡೆಯಾದ ‘ಶುಭ ಮಂಗಲ್‌ ಸಾವಧಾನ್‌’ ಚಿತ್ರದಲ್ಲಿ ನಟ ಆಯುಷ್ಮಾನ್‌ ಖುರಾನಾ ಅವರ ಜೋಡಿಯಾಗಿ ನಟಿ ಭೂಮಿ ಪಡ್ನೇಕರ್‌ ನಟಿಸಿದ್ದಾರೆ. ಈಗ ಆ ಸಿನಿಮಾದ ಸೀಕ್ವೆಲ್‌ ‘ಶುಭ ಮಂಗಲ್‌ ಜ್ಯಾದಾ ಸಾವಧಾನ್‌’ ಸೆಟ್ಟೇರುತ್ತಿದ್ದು, ಇದರಲ್ಲಿ ಭೂಮಿ ಪಡ್ನೇಕರ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 ‘ಶುಭ ಮಂಗಲ್‌ ಸಾವಧಾನ್‌’ ಚಿತ್ರದಲ್ಲಿ ಭೂಮಿ ಅಭಿನಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಸೀಕ್ವೆಲ್‌ ಚಿತ್ರದಲ್ಲಿ ಭೂಮಿ ಅವರ ಫಸ್ಟ್‌ ಲುಕ್‌ ಬಿಡುಗಡೆಯಾಗಿದ್ದು, ಮೊದಲ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಕ್ಕಿಂತ ತೀರಾ ಭಿನ್ನವಾಗಿ ಇದರಲ್ಲಿ ನಟಿಸಿದ್ದಾರೆ. 

 ಚಿತ್ರವನ್ನು ಆನಂದ್‌ ಎಲ್‌. ರಾಯ್‌ ಅವರು ನಿರ್ದೇಶನ ಮಾಡುತ್ತಿದ್ದಾರೆ. ‘ಭೂಮಿ ‘ಶುಭ್‌ ಮಂಗಲ್‌ ಸಾವಧಾನ್‌’ ಕುಟುಂಬದ ಅವಿಭಾಜ್ಯ ಅಂಗ. ಅವರಿಲ್ಲದೇ ಸೀಕ್ವೆಲ್‌ ಚಿತ್ರವನ್ನು ಊಹಿಸಿಕೊಳ್ಳುವುದು ಕಷ್ಟ. ಚಿತ್ರದಲ್ಲಿ ಅವರದು ಪ್ರಮುಖ ಭಾಗ’ ಎಂದು ಹೇಳಿ ಚಿತ್ರಕತೆ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.

 ಇತ್ತೀಚೆಗೆ ವಾರಣಾಸಿಯಲ್ಲಿ ನಡೆದ ಚಿತ್ರೀಕರಣದಲ್ಲಿ ಎರಡು ದಿನಗಳ ಕಾಲ ಭೂಮಿ ಪಾಲ್ಗೊಂಡಿದ್ದರು. ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವುದು ಭೂಷಣ್‌ ಕುಮಾರ್‌. ನೀನಾ ಗುಪ್ತಾ, ಗಜ್‌ರಾಜ್‌ ರಾವ್‌, ಜೀತೆಂದ್ರ ಕುಮಾರ್‌, ಮಾನ್ವಿ ಗಗ್ರೂ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು